ಮೈಸೂರು

ದ್ವಿಚಕ್ರವಾಹನ ಕಳ್ಳರಿಬ್ಬರ ಬಂಧನ : 40 ಬೈಕ್ ವಶ

 ಮೈಸೂರು,ಆ.14:- ವಿಜಯನಗರ ಠಾಣಾ ಪೊಲೀಸರು ಈಚೆಗೆ ಬಂಧಿಸಿದ್ದ ಇಬ್ಬರು ಕಳ್ಳರಿಂದ  ಇದುವರೆಗೆ ಕಳುವು ಮಾಡಿದ್ದ 40ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 16ಲಕ್ಷರೂ. ಎಂದು ಅಂದಾಜಿಸಲಾಗಿದೆ.

ಮೈಸೂರು ನಗರದಲ್ಲಿ  ದ್ವಿ ಚಕ್ರ ವಾಹನಗಳ ಕಳ್ಳತನಗಳು ಪದೇ ಪದೇ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡುವ ಆರೋಪಿಗಳನ್ನು ಹಿಡಿಯುವ ಬಗ್ಗೆ ಹೆಚ್ಚು ಗಮನಹರಿಸುವಂತೆ ಮೈಸೂರು ನಗರದ ಪೊಲೀಸ್ ಆಯುಕ್ತರು  ಆದೇಶಿಸಿದ್ದ ಹಿನ್ನೆಲೆಯಲ್ಲಿ ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ಡಾ. ವಿಕ್ರಮ್ ವಿ ಅಮಟೆರವರ ಮಾರ್ಗದರ್ಶನದಲ್ಲಿ, ನರಸಿಂಹರಾಜ ವಿಭಾಗದ ಎ.ಸಿ.ಪಿ.ರವರಾದ ಗೋಪಾಲ್ ಸಿ. ರವರ ನೇತೃತ್ವದಲ್ಲಿ ವಿಜಯನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತಂಡ ಆ.7ರಂದು ಹೂಟಗಳ್ಳಿಯ ಕೆ.ಆರ್.ಎಸ್. ರಸ್ತೆಯಲ್ಲಿರುವ ಹೋಟೆಲ್ ಸೈಲೆಂಟ್ ಷೋರ್ಸ್ ಬಳಿ ಕಾರ್ಯಾಚರಣೆ ನಡೆಸಿ  ನಂಬರ್ ಪ್ಲೇಟ್ ಇಲ್ಲದ ಹೀರೋ ಸ್ಲ್ಪೆಂಡರ್ ಪ್ಲಸ್ ಬೈಕಿನಲ್ಲಿದ್ದ  ಶ್ರೀನಿವಾಸ @ ಸೀನಿ @ ಬಂಕ್ ಬಿನ್ ವೆಂಕಟರಾಮು, (30) ಹಾಲಿ ವಾಸ ಕೂರ್ಗಳ್ಳಿ ಗ್ರಾಮ, ಮೈಸೂರು ತಾಲೂಕು, ಮೈಸೂರು ಜಿಲ್ಲೆ. ಸ್ವಂತ ಊರು ಕಂಚಿನಕೆರೆ ಗ್ರಾಮ, ಹೊಸ ಅಗ್ರಹಾರ ಹೋಬಳಿ, ಕೆ.ಆರ್. ನಗರ ತಾಲೂಕು, ಮೈಸೂರು ಜಿಲ್ಲೆ.

ದಿನೇಶ @ ದಿನಿ @ ಗೆಂಡೆ ಬಿನ್ ಕಾಳಚಾರ್, (25) ಹಾಲಿ ವಾಸ ಕೂರ್ಗಳ್ಳಿ ಗ್ರಾಮ, ಮೈಸೂರು ತಾಲೂಕು, ಮೈಸೂರು ಜಿಲ್ಲೆ. ಸ್ವಂತ ಊರುಃ ಚಿಕ್ಕಮಳ್ಳಿ ಗ್ರಾಮ, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ ಎಂಬವರನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಲಾಗಿ ಇವರು 2015ನೇ ಇಸವಿಯಿಂದಲೂ ಮೈಸೂರು ನಗರ, ಕೆ.ಆರ್. ನಗರ, ಕೆ.ಅರ್.ಪೇಟೆ, ಮಂಡ್ಯ, ಬೆಳ್ಳೂರು, ಮುಂತಾದ ಸ್ಥಳಗಳಲ್ಲಿ  ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ಒಟ್ಟು 16,00,000ರೂ.ಮೌಲ್ಯದ 40 ದ್ವಿ ಚಕ್ರ ವಾಹನಗಳನ್ನು (ಹೀರೋ ಹೊಂಡಾ ಸ್ಲ್ಪೆಂಡರ್ ಪ್ಲಸ್-22, ಹೀರೋ ಹೊಂಡಾ ಫ್ಯಾಷನ್ ಪ್ಲಸ್-08, ಹೀರೋ ಹೊಂಡಾ ಫ್ಯಾಷನ್ ಪ್ರೋ-08, ಬಜಾಜ್ ಪಲ್ಸರ್-01, ಬಜಾಜ್ ಪ್ಲಾಟೀನಾ-01) ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಿಂದ ವಿಜಯನಗರ ಪೊಲೀಸ್ ಠಾಣೆಯ-15, ಹೆಬ್ಬಾಳು-05, ಮೇಟಗಳ್ಳಿ-01, ವಿ.ವಿ. ಪುರಂ-01, ದೇವರಾಜ-01, ಸರಸ್ವತಿಪುರಂ-01, ಕೆ.ಆರ್. ನಗರ-07, ಇಲವಾಲ-01, ಮಂಡ್ಯ ಪಶ್ಚಿಮ ಠಾಣೆ-02, ಮಂಡ್ಯ ಸೆಂಟ್ರಲ್ ಠಾಣೆ-01, ಕೆ.ಆರ್. ಪೇಟೆ ಗ್ರಾಮಾಂತರ-01, ಶ್ರೀರಂಗಪಟ್ಟಣ-01, ಪಾಂಡವಪುರ-01, ಅರಕೆರೆ-01, ಬೆಳ್ಳೂರು-01 ದ್ವಿ ಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ಈ ಪತ್ತೆ ಕಾರ್ಯವನ್ನು  ನರಸಿಂಹರಾಜ ವಿಭಾಗದ ಎ.ಸಿ.ಪಿ. ಗೋಪಾಲ್ ಸಿ. ರವರ ನೇತೃತ್ವದಲ್ಲಿ ವಿಜಯನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಪಿ.ಎನ್. ಅನಿಲ್‍ಕುಮಾರ್, ಪಿ.ಎಸ್.ಐ. ಎನ್. ರಾಮಚಂದ್ರ, ಅಪರಾಧ ವಿಭಾಗದ ಸಿಬ್ಬಂದಿಯವರಾದ ಎಎಸ್‍ಐ ವೆಂಕಟೇಶಗೌಡ, ಸಿಬ್ಬಂದಿಗಳಾದ ಶಂಕರ್, ಈಶ್ವರ್, ಸ್ವಾಮರಾಧ್ಯ, ಸಾಗರ್, ಶಿವಮೂರ್ತಿ, ಸಿ. ಮಹೇಶ್, ಸಿ.ಡಿ.ಆರ್. ವಿಭಾಗದ ಶ್ಯಾಂ ಮತ್ತು ಆರಾಧ್ಯರವರು ಮಾಡಿದ್ದಾರೆ.     (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: