ಮೈಸೂರು

ಅಪಘಾತದಲ್ಲಿ ಗಾಯಗೊಂಡ ಮಹಿಳೆ ಚಿಕಿತ್ಸೆ ಫಲಿಸದೇ ಸಾವು

ಮೈಸೂರು,ಆ.14:- ಶನಿವಾರ ರಿಂಗ್ ರಸ್ತೆಯ ಕೊಪ್ಪಲೂರು ಜಂಕ್ಷನ್ ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಆ.11ರಂದು ಬೆಳಿಗ್ಗೆ 11ಕ್ಕೆ  ಲಕ್ಷ್ಮೀ.ಆರ್.ಹೆಚ್ ಎಂಬವರು  ರಿಂಗ್ ರಸ್ತೆಯಲ್ಲಿ   ನಂಜನಗೂಡು ರಸ್ತೆ ಕಡೆಯಿಂದ ಟಿ.ವಿ.ಎಸ್‌ ಜ್ಯೂಪಿಟರ್‌ ಸ್ಕೂಟರ್ ನಂ KA-09-HE-1092 ನ್ನು ಕೊಪ್ಪಲೂರು ರಸ್ತೆ ಜಂಕ್ಷನ್‌ ನಲ್ಲಿ  ಜೆ.ಪಿ.ನಗರ  ಸಿ ಜೋನ್‌ ಕಡೆಗೆ ಹೋಗಲು ಬಲಕ್ಕೆ ತಿರುಗಿಸಿಕೊಂಡು ರಿಂಗ್ ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದಾಗ  ರಿಂಗ್ ರಸ್ತೆಯಲ್ಲಿ   ರಮಾಬಾಯಿನಗರದ ಕಡೆಯಿಂದ ಸುಜುಕಿ ರಿಟ್ಜ್‌ ಕಾರ್ ನಂ KA-09-C-5708  ರ ಚಾಲಕ ಕಾರನ್ನು ಅತಿವೇಗವಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು  ಟಿ.ವಿಎ.ಸ್ ಜ್ಯೂಪಿಟರ್ ಸ್ಕೂಟರ್ ನ ಎಡಭಾಗಕ್ಕೆ ಗುದ್ದಿದ್ದ. ಲಕ್ಷ್ಮೀ  ಸ್ಕೂಟರ್ ಸಮೇತ ಬಿದ್ದು ಉಜ್ಜಿಕೊಂಡು ಹೋದ ಪರಿಣಾಮ ತಲೆಗೆ ಗಾಯವಾಗಿತ್ತು. ಕೂಡಲೇ ಅವರನ್ನು  ಜೆ.ಎಸ್.ಎಸ್ ಆಸ್ಪತ್ರೆಗೆ  ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ   ಜು.12 ರಂದು ಬೆಳಿಗ್ಗೆ 7.20 ಕ್ಕೆ ಲಕ್ಷ್ಮಿ ಆರ್.ಹೆಚ್  ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಕೆ.ಆರ್.ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: