
ಪ್ರಮುಖ ಸುದ್ದಿ
ರಾಮನಗರದಲ್ಲಿ ಬಂಧಿತನಾದ ಉಗ್ರನಿಗೂ ತುಮಕೂರಿಗೂ ನಂಟಿದೆ : ಮಾಜಿ ಸಚಿವ ಸೊಗಡು ಶಿವಣ್ಣ ಆರೋಪ
ರಾಜ್ಯ( ತುಮಕೂರು)ಆ.14:- ರಾಮನಗರದಲ್ಲಿ ಬಂಧಿತನಾದ ಉಗ್ರನಿಗೂ ತುಮಕೂರಿಗೂ ನಂಟಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಮನಗರದಲ್ಲಿ ಬಂಧಿತನಾದ ಉಗ್ರನಿಗೂ ತುಮಕೂರಿಗೂ ನಂಟಿದೆ. ತುಮಕೂರಿನಲ್ಲೂ ಅವನ ಸಹಚರರಿದ್ದಾರೆ. ಸರ್ಕಾರ ಅದನ್ನು ಬಹಿರಂಗಪಡಿಸದೇ ಇರೋದು ದುರಾದೃಷ್ಟಕರ. ಎರಡು ವರ್ಷದ ಹಿಂದೆ ತುಮಕೂರಿನಲ್ಲಿ ಬಂಧಿತನಾಗಿದ್ದ ಸೈಯದ್ ಮುಜಾಹಿದ್ ಗೂ ರಾಮನಗರದ ಉಗ್ರನಿಗೂ ನಂಟಿತ್ತು. ತುಮಕೂರಿನಲ್ಲಿ ಹೊರರಾಜ್ಯದಿಂದ ಬಂದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆ. ಅವರ ಮೇಲೆ ಪೊಲೀಸರು ನಿಗಾ ಇಡುತ್ತಿಲ್ಲ. ಸರ್ಕಾರ ವೋಟ್ ಬ್ಯಾಂಕಿಗೋಸ್ಕರ ಉಗ್ರರಿರೋದನ್ನು ಬಹಿರಂಗಪಡಿಸುತ್ತಿಲ್ಲ. ಸರ್ಕಾರಕ್ಕೆ ಜನರ ಸಂತತಿ, ದೇಶ, ಸಮಾಜಕ್ಕಿಂತ ಅಧಿಕಾರ ಮುಖ್ಯ. ತುಮಕೂರಿನಲ್ಲಿ ಡ್ರಗ್ ಮಾಫಿಯಾ ಮಿತಿಮೀರಿದೆ.ಡ್ರಗ್ ಮಾಫಿಯಾದಿಂದ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸರು ದಂದೆಕೋರರ ಜೊತೆ ಶಾಮೀಲಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)