ಮೈಸೂರು

ಆ.17 ರಿಂದ 19ರವರೆಗೆ 7ನೇ ವರ್ಷದ ಪವರ್ ಸ್ಟಾರ್ ಕ್ರಿಕೆಟ್ ಪಂದ್ಯಾವಳಿ

ಮೈಸೂರು,ಆ.14 : ಡಾ.ರಾಜ್ ಕುಮಾರ್ ಕನ್ನಡ ಸೇನೆ, ನಟಿ ರಾಗಿಣಿ ದ್ವಿವೇದಿ ಅಭಿಮಾನಿಗಳ ಸಂಘವು 7ನೇ ವರ್ಷದ ಪವರ್ ಸ್ಟಾರ್ ಕ್ರಿಕೆಟ್ ಪಂದ್ಯಾವಳಿಯನ್ನು ಆ.17 ರಿಂದ 19ರವರೆಗೆ ಆಯೋಜಿಸಲಾಗಿದೆ ಎಂದು ಸೇನೆಯ ಡಿ.ಲೋಹಿತ್ ತಿಳಿಸಿದರು.

ಲಲಿತ್ ಮಹಲ್ ಕ್ರೀಡಾ ಮೈದಾನದಲ್ಲಿ ನಡೆಯುವ 8 ಓವರ್ ಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಆ.17ರ ಬೆಳಗ್ಗೆ 8 ಗಂಟೆಗೆ ನರಸೀಪುರ ಶಾಸಕ ಆಶ್ವಿನ್ ಕುಮಾರ್ ಅವರು ಚಾಲನೆ ನೀಡುವರು. ಪಂದ್ಯಾವಳಿಯಲ್ಲಿ  ಜಿಲ್ಲೆಯ 16 ತಂಡಗಳು ಭಾಗಿಯಾಗಲಿದ್ದು ವಿಜೇತರಾಗಿ 60 ಸಾವಿರ, 30 ಹಾಗೂ ತೃತೀಯ ಬಹುಮಾನವಾಗಿ 10 ಸಾವಿರ ರೂಗಳ ನಗದು ಸೇರಿದಂತೆ ಟ್ರೋಪಿ ನೀಡಲಾಗುವುದು.

ಬಹುಮಾನ ವಿತರಣೆಯನ್ನು ಆ.19ರ ಸಂಜೆ 6ರಲ್ಲಿ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಚಿತ್ರನಟಿ ರಾಗಿಣಿ ದ್ವಿವೇದಿ, ಶಾಸಕರಾದ ರಾಮದಾಸ್, ನಾಗೇಂದ್ರ, ಬಿಜೆಪಿ ಯುವಮೋರ್ಚ ಕಾರ್ಯದರ್ಶಿ ವಿ.ವೈ.ವಿಜಯೇಂದ್ರ, ಬಿಜೆಪಿ ಮುಖಂಡರಾದ ಸಂದೇಶ ಸ್ವಾಮಿ, ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಇನ್ನಿತರರು ಹಾಜರಿದ್ದು ಬಹುಮಾನ ವಿತರಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೇನೆಯ ಅಧ್ಯಕ್ಷ ಮಹದೇವಸ್ವಾಮಿ, ಸದಸ್ಯರಾದ ಮಂಜು, ಶ್ರೀನಿವಾಸ್, ಪ್ರಶಾಂತ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: