ಮೈಸೂರು

ಹುಣಸೂರು ಜೋಡಿ ಕೊಲೆ ಪ್ರಕರಣ : ಮೈಸೂರು ಮನಪಾ ಮಾಜಿ ಸದಸ್ಯ ಅವ್ವ ಮಾದೇಶ್ ಸೇರಿ ಎಂಟು ಮಂದಿ ಜೀವಾವಧಿ ಶಿಕ್ಷೆಯಿಂದ ಖುಲಾಸೆ

ಹೈಕೋರ್ಟ್ ತೀರ್ಪು

ಮೈಸೂರು,ಆ.14:- ಹುಣಸೂರು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೈಸೂರು ಮಹಾನಗರಪಾಲಿಕೆಯ ಮಾಜಿ ಸದಸ್ಯ ಅವ್ವಾ ಮಾದೇಶ್ ಹಾಗೂ  ಸಹೋದರ ಮಂಜುನಾಥ್ ಸೇರಿ ಎಂಟು ಜನರನ್ನು ಜೀವಾವಧಿ ಶಿಕ್ಷೆಯಿಂದ ಖುಲಾಸೆಗೊಳಿಸಿ ಹೈಕೋರ್ಟ್ ತೀರ್ಪು ನೀಡಿದೆ.

2008 ರಲ್ಲಿ ಹುಣಸೂರು ಜೋಡಿ ಕೊಲೆ ನಡೆದಿತ್ತು. ಪ್ರಕರಣ ಕುರಿತು ವಿಚಾರಣೆ ನಡೆಸಿದ್ದ ಮೈಸೂರಿನ ಎರಡನೇ ಅಧಿಕ ಜಿಲ್ಲಾ ನ್ಯಾಯಾಲಯ 2016 ಫೆಬ್ರವರಿಯಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಮೈಸೂರಿನ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಮಾದೇಶ್ ವಕೀಲರು ಹೈ ಕೋರ್ಟ್ ಮೊರೆ ಹೋಗಿದ್ದರು. ಇಂದು ತೀರ್ಪು ಪ್ರಕಟಿಸಿರುವ ಹೈ ಕೋರ್ಟ್ ದ್ವಿ ಸದಸ್ಯ ಪೀಠ ಎಂಟು ಆರೋಪಿಗಳನ್ನು ಜೀವಾವಧಿ ಶಿಕ್ಷೆಯಿಂದ ಖುಲಾಸೆ ಮಾಡಿದೆ. ನ್ಯಾಯ ಮೂರ್ತಿಗಳಾದ ಪಾಟೀಲ್ ಹಾಗೂ ಬೂದಿಹಾಳ್ ಅವರಿದ್ದ ದ್ವಿ ಸದಸ್ಯ ಪೀಠ ಹುಣಸೂರು ಜೋಡಿ ಕೊಲೆ ಪ್ರಕರಣವನ್ನು ಖುಲಾಸೆ ಮಾಡಿ ಆದೇಶ ಹೊರಡಿಸಿದೆ.

ಈ ಸಂಬಂಧ ಎಂಟು ಜನರ ಪೈಕಿ ನಾಲ್ವರು ಜಾಮೀನಿನ ಮೇಲೆ ಹೊರಗಿದ್ದು ಮಾದೇಶ್, ಮಂಜುನಾಥ್ ಸೇರಿ ನಾಲ್ವರು ಜೈಲಿನಲ್ಲಿದ್ದಾರೆ. ಪಡುವಾರಹಳ್ಳಿಯ ಗಾಂಧಿ ಹಾಗೂ  ರಾಮು ಎಂಬವರನ್ನು ಕೊಲೆ ಮಾಡಿದ ಆರೋಪ ಇವರ ಮೇಲಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: