ಮೈಸೂರು

ಆ.21ರಂದು ಡಿ.ದೇವರಾಜೇ ಅರಸ್ ಅವರ ಜನ್ಮ ದಿನಾಚರಣೆ

ಮೈಸೂರು,ಆ.14 : ವಿದ್ಯಾರಣ್ಯಪುರಂನ ಅರಸು ಜಾಗೃತಿ ಅಕಾಡೆಮ ವತಿಯಿಂದ ಆ.21ರಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜೇ ಅರಸ್ ಅವರ 103ನೇ ಜನ್ಮ ದಿನಾಚರಣೆಯನ್ನು ಇನ್ಸ್ ಟಿಟ್ಯೂಟ್ ಆಪ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಬೆಳಗ್ಗೆ 10.45ಕ್ಕೆ ಏರ್ಪಡಿಸಲಾಗಿದೆ.

ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಉದ್ಘಾಟಿಸುವರು. ಧ್ವನಿಕೊಟ್ಟ ದಣಿ ಪ್ರಶಸ್ತಿಯನ್ನು ಮೈವಿವಿ ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರಂಗಪ್ಪ ಅವರು ಪ್ರದಾನ ಮಾಡುವರು. ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ದೇವರಾಜ್ ಅಧ್ಯಕ್ಷತೆ. ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರ್ಸ್ ಅಧ್ಯಕ್ಷ ಚಿನ್ನಸ್ವಾಮಿ, ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎ.ಎಸ್.ಸತೀಶ್, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಡಾ.ಎಂ.ಜಿ.ಆರ್.ಅರಸ್ ಇತರರು ಭಾಗವಹಿಸುವರು.

Leave a Reply

comments

Related Articles

error: