ದೇಶಮನರಂಜನೆ

ನೆರೆರಾಜ್ಯ ಕೇರಳ ನೆರವಿಗೆ ನಿಂತ ಸಿನಿ ತಾರೆಯರು

ಕೇರಳ,ಆ.14-ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೇರಳದಲ್ಲಿ ಪ್ರವಾಹ ಉಂಟಾಗಿದೆ. ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಪ್ರವಾಹದಲ್ಲಿ ಸಿಲುಕಿರುವ ನೆರೆರಾಜ್ಯ ಕೇರಳಕ್ಕೆ ಹಲವು ರಾಜ್ಯಗಳು ನೆರವಿಗೆ ಧಾವಿಸುತ್ತಿದೆ.

ಮಲಯಾಳಂ ಮಾತ್ರವಲ್ಲದೆ, ತಮಿಳು, ತೆಲುಗು, ಕನ್ನಡ ಚಿತ್ರರಂಗದ ಕಲಾವಿದರು ಸಹ ನೆರವಿಗೆ ಧಾವಿಸುತ್ತಿದ್ದಾರೆ. ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ 25 ಲಕ್ಷ ರೂ., ಬಿಗ್ ಬಾಸ್ ಪ್ರಸಾರ ಮಾಡುತ್ತಿರುವ ತಮಿಳಿನ ವಿಜಯ ಟಿವಿ 25 ಲಕ್ಷ ರೂ., ದಕ್ಷಿಣ ಭಾರತದ ಖ್ಯಾತ ನಟರು ಹಾಗೂ ಸಹೋದರರು ಸೂರ್ಯ ಮತ್ತು ಕಾರ್ತಿ ತಲಾ 25 ಲಕ್ಷ ರೂ., ನಟ ಅಲ್ಲು ಅರ್ಜುನ್ 25 ಲಕ್ಷ ರೂ., ಮಲಯಾಳಂ ಕಲಾವಿದರ ಸಂಘ 10 ಲಕ್ಷ ರೂ., ನಟರಾದ ಮೋಹನ್ ಲಾಲ್ 25 ಲಕ್ಷ ರೂ., ಮೊಮ್ಮಟಿ 15 ಲಕ್ಷ ರೂ., ದುಲ್ಕರ್ ಸಲ್ಮಾನ್ 10 ಲಕ್ಷ ರೂ., ಕೇರಳದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಅವರು 1 ಲಕ್ಷ ರೂ., ತಮಿಳು ಕಲಾವಿದರ ಸಂಘ 5 ಲಕ್ಷ ರೂ., ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 5 ಲಕ್ಷ ರೂ., ತೆಲುಗು ರೈಸಿಂಗ್ ಸ್ಟಾರ್ ವಿಜಯ್ ದೇವರಕೊಂಡ 5 ಲಕ್ಷ ರೂ. ಸೇರಿದಂತೆ ಇನ್ನು ಹಲವರು ಸಿಎಂ ನಿಧಿಗೆ ಹಣ ನೀಡಿದ್ದಾರೆ.

ಕೇರಳ ನನಗೆ ಇಷ್ಟವಾದ ಜಾಗ, ಈಗ ಅಲ್ಲಿನ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಆದಷ್ಟೂ ಬೇಗ ಮೊದಲಿನಿ ಸ್ಥಿತಿಗೆ ಬರಲಿ ವಿಜಯ್ ದೇವರಕೊಂಡ ಕೇಳಿಕೊಂಡಿದ್ದಾರೆ.

ಇವರಷ್ಟೇ ಅಲ್ಲದೆ, ರಜನಿಕಾಂತ್, ಕಮಲ್ ಹಾಸನ್, ವಿಜಯ್, ಅಜಿತ್ ಅಭಿಮಾನಿಗಳ ಸಂಘಗಳು ಕೇರಳ ಜನರ ಬೆಂಬಲಕ್ಕೆ ನಿಂತಿದೆ. (ಎಂ.ಎನ್)

 

Leave a Reply

comments

Related Articles

error: