ಮೈಸೂರು

ಸಮಸ್ಯೆ ನಿವಾರಣೆಗೆ ಮಾಧ್ಯಮಗಳು ಶ್ರಮಿಸಬೇಕು: ಡಾ.ಎನ್.ಎಸ್. ಅಶೋಕ್ ಕುಮಾರ್

ನೋಟು ನಿಷೇಧದಿಂದ ಉಂಟಾದ ಸಮಸ್ಯೆ ನಿರ್ವಹಣೆ ಹಾಗೂ ಅನುಕೂಲದ ಬಗ್ಗೆ ಮಾಧ್ಯಮಗಳು ಮನವರಿಕೆ ಮಾಡಿಕೊಡುವ ಜವಾಬ್ದಾರಿ ಹೊರಬೇಕು ಎಂದು ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ.ಎನ್.ಎಸ್. ಅಶೋಕ್ ಕುಮಾರ್ ಹೇಳಿದರು.

ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ನೋಟು ರದ್ದತಿ ಮತ್ತು ಮಾಧ್ಯಮ ವಿಚಾರ ಸಂಕಿರಣದಲ್ಲಿ ಮಾತನಾಡಿ, ವಿಶ್ವದ 9 ರಾಷ್ಟ್ರಗಳಲ್ಲಿ ನೋಟುಗಳ ಅಮಾನ್ಯ ಪ್ರಯತ್ನ ನಡೆದಿದ್ದು, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾಗಳಲ್ಲಿ ವಿಫಲವಾಗಿತ್ತು. ವೆನಿಜುವೆಲಾ ರಾಷ್ಟ್ರಗಳಲ್ಲಿ ನೋಟುಗಳ ರದ್ದತಿ ನಿರ್ಧಾರ ಕೈಗೊಂಡಾಗ ಅಲ್ಲಿನ ಜನರು ವಿರೋಧಿಸಿದ್ದರಿಂದ ಸರಕಾರ ತನ್ನ ತೀರ್ಮಾನ ಹಿಂಪಡೆದಿತ್ತು ಎಂದರು.

ನೋಟು ನಿಷೇಧದ ನಿರ್ಧಾರದಿಂದ ಸಾಕಷ್ಟು ತೊಂದರೆಯಾಗಿದ್ದು, ಇದನ್ನು ತುರ್ತು ಪರಿಸ್ಥಿತಿಗೆ ಹೋಲಿಸಲಾಗುತ್ತಿದೆ. ಆದರೆ, ಎಮರ್ಜೆನ್ಸಿ ಸಂದರ್ಭದಲ್ಲಿ ಕೆಲವು ವರ್ಗಕ್ಕೆ ಮಾತ್ರವೇ ತೊಂದರೆಯಾಗಿದ್ದು, ಈಗ ದೇಶದ ಎಲ್ಲ ವರ್ಗದ ಜನರಿಗೂ ತೊಂದರೆಯಾಗುತ್ತಿದೆ. ನಗದು ರಹಿತ ಡಿಜಿಟಲ್ ವ್ಯವಹಾರದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಹಾಗೂ ವಿದ್ಯುತ್ ಸಮಸ್ಯೆ ಬಗ್ಗೆ ಗಮನಹರಿಸಬೇಕೆಂದು ಹೇಳಿದರು.

ಹಿರಿಯ ಪತ್ರಕರ್ತ ರವೀಂದ್ರ ಭಟ್, ಉಮೇಶ್ ಭಟ್, ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿಗಾರ್ತಿ ಡಾ.ಕೆ. ಆಶಾ, ವಿವಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಪ್ರೊ.ಎನ್. ಉಷಾರಾಣಿ ಉಪಸ್ಥಿತರಿದ್ದರು.

Leave a Reply

comments

Related Articles

error: