ಸುದ್ದಿ ಸಂಕ್ಷಿಪ್ತ

ತರಬೇತಿ ಅರ್ಜಿ ಆಹ್ವಾನ

ಮೈಸೂರು,ಆ.14-ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಐಸಿಐಸಿಐ ಫೌಂಡೇಶನ್ ಮೂಲಕ 03 ತಿಂಗಳ Job Oriented Vocational Skill Development ತರಬೇತಿಯಡಿ ಆಫೀಸ್ ಅಡ್ಮಿನಿಸ್ಟ್ರೇಷನ್/ರಿಟೇಲ್ ಸೇಲ್ಸ್ ತರಬೇತಿಯನ್ನು ನೀಡಲು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ  ನಿರುದ್ಯೋಗಿ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 30ರ  ಒಳಗಿರಬೇಕು. ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ್ದು, ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ 40,000 ರೂ. ಮತ್ತು ನಗರ ಪ್ರದೇಶದವರಿಗೆ 55,000 ರೂ. ವಯೋಮಿತಿಗಳಿರಬೇಕು.

10ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ ಪದವಿಯವರೆಗೆ ವಿದ್ಯಾಬ್ಯಾಸ ಹೊಂದಿರಬಹುದು. ಎಸ್.ಎಸ್.ಎಲ್.ಸಿ/ ಪದವಿ ಅಂಕಪಟ್ಟಿ ಸಲ್ಲಿಸಬೇಕು. ಅಭ್ಯರ್ಥಿಗಳು  ಪಾಸ್‍ಪೋರ್ಟ್ ಅಳತೆಯ 02 ಭಾವಚಿತ್ರಗಳನ್ನು ಸಲ್ಲಿಸಬೇಕು. ಆಧಾರ ಕಾರ್ಡ್/ ಚುನಾವಣಾ ಗುರುತಿನ ಚೀಟಿ ಸಲ್ಲಿಸಬೇಕು. ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪುರುಷರಿಗೆ ಬೆಂಗಳೂರಿನಲ್ಲಿ ಹಾಗೂ ಯುವತಿಯರಿಗೆ ಮೈಸೂರಿನ  ಐಸಿಐಸಿಐ ಫೌಂಡೇಷನ್ ಮೂಲಕ ನೀಡಲಾಗುತ್ತಿದ್ದು. 03 ತಿಂಗಳ ತರಬೇತಿ ನಂತರ ಉದ್ಯೋಗಾವಕಾಶವನ್ನ ಪಡೆಯಲು ಅನುಕೂಲವಾಗುತ್ತದೆ.

ಈ ತರಬೇತಿಯನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು (ವಿಶ್ವಕರ್ಮ, ಅಲ್ಪಸಂಖ್ಯಾತರ ಅಭ್ಯರ್ಥಿಗಳನ್ನು ಹೊರತುಪಡಿಸಿ) ಆ.23 ರೊಳಗಾಗಿ ತಮ್ಮ ವ್ಯಕ್ತಿಗತ ವಿವರಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ), ಬಿ.ಬಿ.ಗಾರ್ಡನ್  2ನೇ ರಸ್ತೆ, ಪದ್ಮ ಚಿತ್ರಮಂದಿರದ ಹತ್ತಿರ, ಮೈಸೂರು ಇಲ್ಲಿಗೆ ಅರ್ಜಿ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ.0821-2341194 ಸಂಪರ್ಕಿಸಬಹುದು. (ಎಂ.ಎನ್)

Leave a Reply

comments

Related Articles

error: