ಕರ್ನಾಟಕಮೈಸೂರು

ಕಾರ್ಮಿಕರ ಭವಿಷ್ಯನಿಧಿ ಬಾಕಿ ಕಂತು ವಸೂಲಾತಿ ಪ್ರಕ್ರಿಯೆಗೆ ಮೈಸೂರು ಕ್ಷೇತ್ರೀಯ ಕಚೇರಿಯಿಂದ ಚಾಲನೆ

ಕಾರ್ಮಿಕರ ಭವಿಷ್ಯನಿಧಿ ಸಂಘಟನೆ, ಮುಖ್ಯ ಕಛೇರಿ, ನವದೆಹಲಿಯ ಆದೇಶದಂತೆ ಕ್ಷೇತ್ರೀಯ ಭವಿಷ್ಯನಿಧಿ ಕಛೇರಿ, ಮೈಸೂರು ವತಿಯಿಂದ ಸೆಪ್ಟಂಬರ್ 1 ರಿಂದ 30 ರ ವರೆಗೆ ವಿಶೆಷ ವಸೂಲಾತಿ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತ ಡಾ.ಜಿ. ಸಿವಕುಮಾರ್ ತಿಳಿಸಿದ್ದಾರೆ.

ಭವಿಷ್ಯನಿಧಿ ಕಾಯ್ದೆಯಂತೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಚರ, ಸ್ಥಿರ ಆಸ್ತಿಗಳ ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ಬಹಿರಂಗ ಹರಾಜು ಮಾಡುವುದು, ತಪ್ಪಿತಸ್ಥ ಮಾಲೀಕರನ್ನು ಬಂಧಿಸಿ ಸಿವಿಲ್ ಕಾರಾಗೃಹಕ್ಕೆ ಒಪ್ಪಿಸಲಾಗುವುದು. ಸೆಕ್ಷನ್ 14 ಹಾಗೂ 14 A ಪ್ರಕಾರ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿಕೆ, ಐಪಿಸಿ ಸೆಕ್ಷನ್ 406/409 ಪ್ರಕಾರ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ರಿಸೀವರನ್ನು ನೇಮಕ ಮಾಡಿ ಚರ ಸ್ಥಿರ ಆಸ್ತಿಯ ವಹಿವಾಟನ್ನು ನೋಡಿಕೊಳ್ಳಲು ಒಪ್ಪಿಸುವುದು ಎಂದು ಹೇಳಿದ್ದಾರೆ.

ಆದ್ದರಿಂದ ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ತಪ್ಪಿತ ಮಾಲೀಕರ  ಬಾಕಿ ಇರುವ ವಂತಿಗೆಯನ್ನು ಕೂಡಲೇ ಪಾವತಿಸಬೇಕೆಂದು ಸೂಚನೆ ನೀಡಿದ್ದಾರೆ.

Leave a Reply

comments

Related Articles

error: