ಮೈಸೂರು

ಡಿ.23ರಿಂದ ಜ.1ರವರೆಗೆ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ : ಹೂವಿನಿಂದ ಜಂಬೂಸವಾರಿಯ ಅನಾವರಣ

ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ, ಗುಲಾಬಿ ಹೂವಿನಿಂದ ಸಿಂಗರಗೊಳ್ಳುವ ದಸರಾ ಮೆರವಣಿಗೆಯ ಜಂಬೂ ಸವಾರಿ ದೃಶ್ಯಾವಳಿಗಳು, ಕುದುರೆ, ಒಂಟೆ, ಸೈನಿಕರು ಹಾಗೂ ಆನೆಗಾಡಿಯಲ್ಲಿ ಕುಳಿತು ನುಡಿಸುತ್ತಿರುವ ವಾದ್ಯ ವೃಂದವು, ಮಕ್ಕಳ ಮೆಚ್ಚಿನ ಸ್ಪೈಡರ್ ಮ್ಯಾನ್, ಡೊನಾಲ್ಡ್ ಡಕ್, ಮಿಕ್ಕಿ ಮೌಸ್ ಅಕೃತಿಗಳು ಫಲಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿವೆ.

ಪ್ರವಾಸಿಗರ ನೆಚ್ಚಿನ ತಾಣ ಮೈಸೂರಿನಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ಕಳೆದ ವರ್ಷದಂತೆ ಈ ಬಾರಿಯೂ ಡಿಸೆಂಬರ್‍ ನಲ್ಲಿ  ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಂಡಿದ್ದು ಪ್ರವಾಸಿಗರಿಗೆ ಮತ್ತಷ್ಟು ಮುದ ನೀಡಲು ಸಿದ್ಧವಾಗುತ್ತಿದೆ.

ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಹಾಗೂ ಸಾಂಸ್ಕೃತಿಕ ದ್ಯೋತಕವಾದ ಮೈಸೂರು ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು ಡಿ.23ರಂದು ಸಂಜೆ 5ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಪ್ರವಾಸೋದ್ಯಮವೇ ಜೀವಾಳವಾಗಿರುವ ಮೈಸೂರಿನಲ್ಲಿ ವರ್ಷದಲ್ಲಿ ಎರಡನೇ ಬಾರಿಗೆ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿ ಪ್ರವಾಸಿಗರನ್ನು ಕೈಬೀಸಿ ಕರೆಯಲು ಸಿದ್ಧತೆ ನಡೆಸಿದೆ. ಡಿಸೆಂಬರ್ ತಿಂಗಳ ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿರುವ ಜನತೆ ಹಾಗೂ ಶಾಲಾ ರಜಾ ದಿನಗಳನ್ನು ಪರಿಗಣಿಸಿ ಜಿಲ್ಲಾಡಳಿತ ಯೋಜನೆಯನ್ನು ಜಾರಿಗೊಳಿಸಿದೆ.

ಡಿ.23ರಿಂದ ಜ.1ರವರೆಗೆ ನಡೆಯುವ ಫಲಪುಷ್ಪ ಪ್ರದರ್ಶನವು ತನ್ನ ಸೊಬಗನ್ನು ಹೆಚ್ಚಿಸಲು 1.5 ಎಕರೆ ಪ್ರದೇಶದಲ್ಲಿ ವಿವಿಧ ಬಗೆಯ ಹೂವಿನ 10 ಸಾವಿರ ಕುಂಡಗಳಿಂದ ಅಲಂಕರಿಸಲಾಗುವುದು, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ, ಗುಲಾಬಿ ಹೂವಿನಿಂದ ಸಿಂಗಾರಗೊಳ್ಳುವ ದಸರಾ ಮೆರವಣಿಗೆಯ ಜಂಬೂಸವಾರಿ ದೃಶ್ಯವಳಿಗಳು, ಕುದುರೆ, ಒಂಟೆ, ಸೈನಿಕರು ಹಾಗೂ ಆನೆಗಾಡಿಯಲ್ಲಿ ಕುಳಿತು ನುಡಿಸುತ್ತಿರುವ ವಾದ್ಯ ವೃಂದವು, ಮಕ್ಕಳ ಮೆಚ್ಚಿನ ಸ್ಪೈಡರ್ ಮ್ಯಾನ್, ಡೊನಾಲ್ಡ್ ಡಕ್, ಮಿಕ್ಕಿ ಮೌಸ್ ಅಕೃತಿ ಸೇರಿದಂತೆ ಫಲಪುಷ್ಪ ಪ್ರದರ್ಶನದಲ್ಲಿ ಮತ್ತೊಮ್ಮೆ ದಸರಾ ಜಂಬೂ ಸವಾರಿಯು ಅನಾವರಣಗೊಳ್ಳುವುದು.

ಛಾಯಾಚಿತ್ರ –ವಿಡಿಯೋ ಪ್ರದರ್ಶನ: ದಸರಾ ಅಂದು-ಇಂದು, ವಿಷಯವಾಗಿ ಕೃಷ್ಣರಾಜ ಒಡೆಯರ್ ಅವರ ಕಾಲದಿಂದಲೂ ಇಲ್ಲಿಯವರೆಗೆ ಮೈಸೂರು ಅರಮನೆ ರಾಜವಂಶಸ್ಥರ ಹಾಗೂ ಆಳ್ವಿಕೆ ಕುರಿತಾದ ರೂಲ್ಸ್ ಆಫ್ ಒಡೆಯರ್ ಡೈನಸ್ಟಿ ಇತಿಹಾಸವುಳ್ಳ ಫೋಟೋ ಗ್ಯಾಲರಿಯ ಛಾಯಾಚಿತ್ರ-ವಿಡಿಯೋ ಪ್ರದರ್ಶನವನ್ನು ಆಯೋಜಿಸಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸುವರು. ವಯಸ್ಕರಿಗೆ 20 ರೂ. ಮತ್ತು ಮಕ್ಕಳಿಗೆ 10 ರೂ. ಪ್ರವೇಶ ಶುಲ್ಕವಿದ್ದು ಸಂಜೆ 7.15ರಿಂದ 8ರವರೆಗೆ ವಿದ್ಯುತ್ ದೀಪಾಲಂಕಾರವಿರುವುದು.

ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸಿಗರನ್ನು ಸೆಳೆಯಲು ವರ್ಚುಯಲ್ ಟೂರ್ ವೈಬ್‍ಸೈಟ್‍ನ್ನು ಉದ್ಘಾಟಿಸಲಾಗುವುದು. ಇದೇ ಸಂದರ್ಭದಲ್ಲಿ ಅರಮನೆ ಆಡಳಿತ ಮಂಡಳಿಯ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಗುವುದು.  ಬಿ.ಎಸ್.ಎನ್‍.ಎಲ್ ನಿಂದ ಉಚಿತ ವೈಫೈ ಸೇರಿದಂತೆ  ಆರೋಗ್ಯ ಸೇವಾ ಕೇಂದ್ರ, ಬೇಬಿ ಸೆಂಟರ್‍ಗಳು ಕಾರ್ಯನಿರ್ವಹಿಸಲಿವೆ.

img_2753

Leave a Reply

comments

Related Articles

error: