ಮೈಸೂರು

ತಂಬಾಕು ಮುಕ್ತ ಮೈಸೂರು ನಗರ ಪರಿಣಾಮಕಾರಿ ಜಾರಿಗೆ ಜಿಲ್ಲಾಡಳಿತದ ಕ್ರಮ

ಮೈಸೂರು,ಆ.14:-  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಕಚೇರಿ, ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮೈಸೂರುನಲ್ಲಿಂದು ಡಾ ಕುಸುಮ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಮತ್ತು ಕೆ.ಎಸ್,ಆರ್,ಟಿ,ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಬನ್ನಿಮಂಟಪ ಡಿಪೋ ಮ್ಯಾನೇಜರ್, ಮುಖ್ಯ ಕಾರ್ಮಿಕ  ಕಲ್ಯಾಣಾಧಿಕಾರಿಗಳು ಹಾಗು ಸಾತಗಳ್ಳಿ ಡಿಪೋ ಮ್ಯಾನೇಜರ್ ರವರ ಸಹಯೋಗದೊಂದಿಗೆ ಕೆ.ಎಸ್,ಆರ್,ಟಿ,ಸಿ ಚಾಲಕರು, ನಿರ್ವಾಹಕರು ಮತ್ತು ವರ್ಕ್‍ಶಾಪ್ ಸಿಬ್ಬಂದಿಗಳಿಗೆ ‘’ತಂಬಾಕು ಮುಕ್ತ’’ ಮೈಸೂರು ನಗರ ಕಾರ್ಯಕ್ರಮದ  ಪ್ರಾರಂಭಿಕ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.

ಕೋಟ್ಪಾ-2003 (ಕೋಟ್ಪಾ )ಕಾಯಿದೆಯ ಸೆಕ್ಷನ್ 4,5,6 ಹಾಗೂ7 ಗಳನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಈ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಕ್ರಮ ತೆಗೆದುಕೊಳ್ಳಲಾಗಿದೆ ಮತ್ತು ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಆಗತ್ಯವಿದೆ ಎಂದು ಅಧಿಕಾರಿಗಳು ಎಲ್ಲರಿಗೂ ಸೂಚನೆ ನೀಡಿದರು. ಈ ಕೆಳಗಿನ ಅಧಿಕಾರಿಗಳು ಭಾಗಿಯಾಗಿದ್ದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ  ಜಿಲ್ಲಾ ಸಲಹೆಗಾರರಾದ ಶಿವಕುಮಾರ್.ಜಿ, ಜಿಲ್ಲಾ ಸಮಾಜ ಕಾರ್ಯಕರ್ತ ನವೀದುಲ್ಲಾ ಷರೀಫ್, ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡು, ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯ ಸಮರ್ಪಕ ಅನುಷ್ಠಾನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಸಾರ್ವಜನಿಕರಲ್ಲಿ ಕೋಟ್ಪಾ-2003 ಕಾಯಿದೆಯ ಕುರಿತು 4 ನೇ ವಿಧಿಯ ಪ್ರಕಾರ ಸಾರ್ವಜನಿಕ ಸ್ಥಳಗಳಾದ ಬಸ್ ಸ್ಟ್ಯಾಂಡ್‍ಗಳು, ಪಾರ್ಕ್‍ಗಳು, ಹೋಟೆಲ್ ಹಾಗೂ ರೆಸ್ಟೋರೆಂಟ್‍ಗಳು, ಬೇಕರಿಗಳು, ಎಲ್ಲಾ ಅಂಗಡಿ ಮುಂಗಟ್ಟುಗಳು, ಸಿನಿಮಾ ಥಿಯೇಟರ್‍ಗಳು, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಯ ಆವರಣಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದ್ದು,  ಇದಕ್ಕೆ ಸಂಬಂಧಪಟ್ಟ ಫಲಕಗಳನ್ನು ಈ ಕೂಡಲೇ ಅಳವಡಿಸಿಕೊಳ್ಳಲು ಸೂಚಿಸಲಾಯಿತು. ಸಾರ್ವಜನಿಕರ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾನೂನಿನ ಪ್ರಕಾರ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಛೇರಿಗಳ ಮುಖ್ಯ ದ್ವಾರ ಸೇರಿದಂತೆ, ಸಾರ್ವಜನಿಕರು ಹೆಚ್ಚಾಗಿ ಬಳಸುವ ಸ್ಥಳಗಳಲ್ಲಿ ಸ್ಪಷ್ಟವಾಗಿ ಕಾಣುವಂತೆ ಧೂಮಪಾನ ನಿಷೇಧ ಫಲಕಗಳನ್ನು ಹಾಕಬೇಕು. ಈ ಎಚ್ಚರಿಕೆ ಫಲಕಗಳು ಬಿಳಿ ಹಿನ್ನೆಲೆಯಲ್ಲಿ ಕನಿಷ್ಠ 30 ರಿಂದ 60 ಸೆಂಟಿಮೀಟರ್‍ನವರೆಗೆ ಇರಬೇಕು ಫಲಕದಲ್ಲಿ 15 ಸೆಂಟಿಮೀಟರ್‍ನಷ್ಟು ವೃತ್ತಕಾರದಲ್ಲಿ ದಟ್ಟಹೊಗೆಯಿಂದ ಕೂಡಿದ ಸಿಗರೇಟ್ ಚಿತ್ರವಿರಬೇಕು, ನಿಷೇಧ ಎಂಬುದನ್ನು ಸೂಚಿಸಲು ‘ಇಂಟು ಮಾರ್ಕ್ ವೃತ್ತಾಕಾರ’ದಲ್ಲಿ ಮುದ್ರಣವಾಗಿರಬೇಕು. ಧೂಮಪಾನಿಗಳ ವಿರುದ್ಧ ದೂರು ನೀಡಲು ಸ್ಥಳೀಯ ಪೊಲೀಸ್ ಸ್ಟೇಷನ್ /ಸಂಬಂಧ ಪಟ್ಟ ಅಧಿಕಾರಗಳ ದೂರವಾಣಿ ಸಂಖ್ಯೆಯನ್ನು ನಮೂದಿಸಿರಬೇಕು ಎಂದು ಸೂಚಿಸಲಾಯಿತು.

5 ನೇ ವಿಧಿಯ ಪ್ರಕಾರ  ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಈ ಕೂಡಲೇ ತೆರವುಗೊಳಿಸಲು ಸೂಚಿಸಲಾಯಿತು. 6ನೇ ಎ ವಿಧಿಯ ಪ್ರಕಾರ  18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ತಂಬಾಕು ಮಾರಾಟ ನಿಷೇಧಿಸಲಾಗಿದೆ. 6ನೇ ಬಿ ವಿಧಿಯ ಪ್ರಕಾರ  ಎಲ್ಲಾ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಯಾರ್ಡ್/ ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ನಿಷೇಧ ಹಾಗೂ ಶಾಲಾ ಕಾಲೇಜುಗಳು ಇದನ್ನು ಸೂಚಿಸುವ ಫಲಕಗಳನ್ನು, ವಿದ್ಯಾಸಂಸ್ಥೆಗಳ ಆವರಣದ ಹೊರಗಡೆ ಅಳವಡಿಸುವುದು ಕಡ್ಡಾಯವಾಗಿದ್ದು. ಉಲ್ಲಂಘನೆಯಾಗಿದ್ದಲ್ಲಿ  ಅಂತಹ ಮಾರಾಟ  ಮಳಿಗೆಗಳ ಹಾಗೂ ಶಿಕ್ಷಣ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಾನೂನಿನ ಪ್ರಕಾರ ತಂಬಾಕು ಉತ್ಪನ್ನಗಳ ಮಾರಾಟ  ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಕುರಿತು ಸೂಚನಾ ಫಲಕಗಳನ್ನು ಅಳವಡಿಸಿಕೊಳ್ಳಬೇಕು.  ಕಾನೂನಿನನ್ವಯ ಸೂಚನಾ ಫಲಕಗಳನ್ನು ಪ್ರದರ್ಶಿಸುವುದು ಅಂಗಡಿ ಮುಂಗಟ್ಟುಗಳ ಮಾಲೀಕರ ಜವಾಬ್ದಾರಿಯಾಗಿದ್ದು, ಈ ಕೂಡಲೇ ಅಳವಡಿಸಿಕೊಳ್ಳಲು ಸೂಚಿಸಲಾಯಿತು.

ಬೀಡಿ, ಸಿಗರೇಟು, ತಂಬಾಕು ಉತ್ಪನ್ನದ ಬಿಡಿ ಮಾರಾಟ ನಿಷೇಧ

ಕರ್ನಾಟಕ ರಾಜ್ಯದಲ್ಲಿ ಬಿಡಿ ಬಿಡಿಯಾಗಿ ಮಾರಾಟ ಮಾಡುತ್ತಿರುವ ಬೀಡಿ, ಸಿಗರೇಟು,ಜಗಿಯುವ ತಂಬಾಕು ಉತ್ಪನ್ನಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಈ ಬಗ್ಗೆ ಕಾನೂನನ್ನು ಉಲ್ಲಂಘಿಸಿದ ಯಾವುದೇ ವ್ಯಕ್ತಿಯು ಕೋಟ್ಪಾ ಕಾಯ್ದೆ-2003 ರ ಕಲಂ (20)ರ ಅಡಿಯಲ್ಲಿ ದಂಡನೆಗೆ ಒಳಗಾಗುತ್ತಾರೆ. ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: