
ಮೈಸೂರು
ಪೊಲೀಸ್ ಕರ್ತವ್ಯಕೂಟ: ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ
ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ನಡೆಯುತ್ತಿರುವ 60 ನೇ ಅಖಿಲ ಭಾರತ ಪೊಲೀಸ್ ಕರ್ತವ್ಯಕೂಟದಲ್ಲಿ ಪೊಲೀಸರಿಗೆ ಆಯೋಜಿಸಿರುವ ವಿವಿಧ ಸ್ಪರ್ಧೆಗಳಲ್ಲಿ ಹಲವರು ವಿಜೇತರಾಗಿದ್ದಾರೆ.
ಪೊಲೀಸ್ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕರ್ನಾಟಕದ ಚಂದ್ ಪಾಷಾ ಪ್ರಥಮ ಸ್ಥಾನ ಗಳಿಸಿದ್ದು, ಆರ್.ಪಿ.ಎಫ್. ಕಾನ್ಸ್ಟೇಬಲ್ ಪಿ.ಕೆ. ಮಂಡಲ್ ದ್ವಿತೀಯ ಹಾಗೂ ಪಂಜಾಬಿನ ಹೆಡ್ ಕಾನ್ಸಟೇಬಲ್ ಹರ್ವಿಂದರ್ ಸಿಂಗ್ ತೃತೀಯ ಸ್ಥಾನ ಪಡೆದಿದ್ದಾರೆ.
ವೈಜ್ಞಾನಿಕ ತನಿಖೆ ವಿಧಾನ ವಿಭಾಗದ ಗ್ರಹಿಕೆಯ ಪರೀಕ್ಷೆಯಲ್ಲಿ ಮಹಾರಾಷ್ಟ್ರದ ಕಾನ್ಸಟೇಬಲ್ ಎಂ. ಸಹ, ತಮಿಳುನಾಡಿನ ಹೆಡ್ ಕಾನ್ಸಟೇಬಲ್ ಡಿ. ವಿಜಯ್ ಹಾಗೂ ಮಹಾರಾಷ್ಟ್ರದ ಕಾನ್ಸಟೇಬಲ್ ಜೆ.ಐ. ಶೇಖ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಸಂಚು ಬೇಧನಾ ವಿಭಾಗದ ವಾಹನ ಶೋಧ ಸ್ಪರ್ಧೆಯಲ್ಲಿ ಕೇರಳದ ಕಾನ್ಸಟೇಬಲ್ ಪಿ.ಅನಿಲ್ ಕುಮಾರ್ ಪ್ರಥಮ, ಮುಖ್ಯ ಕಾನ್ಸಟೇಬಲ್ ಎಸ್.ಎನ್. ರಾಜ್ ದ್ವಿತೀಯ, ಆಂಧ್ರಪ್ರದೇಶದ ಕಾನ್ಸಟೇಬಲ್ ಡಿ.ಯುಗಾಂಧರ್ ತೃತೀಯ ಸ್ಥಾನಗಳಿಸಿದ್ದಾರೆ.
ಕರ್ತವ್ಯ ಕೂಟದ ಸಂಘಟನಾ ಕಾರ್ಯದರ್ಶಿ ಭಾಸ್ಕರರಾವ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.