ಪ್ರಮುಖ ಸುದ್ದಿ

ಕೆಆರ್ ಎಸ್ ಜಲಾಶಯದಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ

ರಾಜ್ಯ(ಮಂಡ್ಯ)ಆ.15:-  ಕೆಆರ್ ಎಸ್ ಜಲಾಶಯದಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟ ಹಿನ್ನಲೆಯಲ್ಲಿ ತಲಕಾಡು ಕಾವೇರಿ ನದಿ ಸೇತುವೆ ಸಂಪೂರ್ಣ ಮುಳುಗಡೆಗೊಂಡಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಸೇತುವೆ ಮೇಲೆ ಪ್ರಯಾಣಿಕರಿಗೆ ತಾಲೂಕು ಆಡಳಿತ  ನಿರ್ಬಂಧ ಹೇರಿದೆ. ವಾಹನಗಳು ತಲಕಾಡು ಪ್ರವೇಶಿಸಲು  ಬದಲಿ ರಸ್ತೆ ಪುರಿಗಾಲಿ, ಮುಡುಕುತೊರೆ ಗ್ರಾಮದ ಮಾರ್ಗವಾಗಿ ತೆರಳುತ್ತಿವೆ. ಕಾವೇರಿ ನದಿ ಪ್ರವಾಹದಿಂದ ತಾಲೂಕಿನ ವಿವಿಧೆಡೆ ನೂರಾರು ಎಕರೆ ಜಮೀನು ಜಲಾವೃತಗೊಂಡಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ತಲಕಾಡು ಸಮೀಪದ ತಡಿ ಮಾಲಂಗಿ ಗ್ರಾಮದ ಐದಕ್ಕೂ ಹೆಚ್ಚು ಕುಂಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: