ಪ್ರಮುಖ ಸುದ್ದಿ

ಮಳೆಯ ನಡುವೆಯೇ ಕೊಡಗಿನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ನಾಗರಪಂಚಮಿ ಹಬ್ಬ

ರಾಜ್ಯ(ಮಡಿಕೇರಿ) ಆ.15 :- ಸಹೋದರ-ಸಹೋದರಿಯರ ಭ್ರಾತೃತ್ವದ ಸಂಕೇತವಾದ ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನ ಆಚರಿಸಲ್ಪಡುವ ನಾಗರ ಪಂಚಮಿಯನ್ನು ಕೊಡಗು ಜಿಲ್ಲೆಯಲ್ಲೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ನಗರದ ಬ್ರಾಹ್ಮಣರ ಬೀದಿಯ ಅಶ್ವತ್ಥ ಕಟ್ಟೆಯಲ್ಲಿ ನಾಗನಕಲ್ಲಿಗೆ ಅಭಿಷೇಕ, ಅಲಂಕಾರ ಪೂಜೆ ಸೇರಿದಂತೆ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಹೆಚ್ಚಿನ ಸಂಖ್ಯೆಯಲ್ಲಿದ್ದ ಹೆಂಗಳೆಯರು ಹಾಗೂ ಮಕ್ಕಳು ನಾಗನಕಲ್ಲಿಗೆ ಪುಷ್ಪಾರ್ಚನೆ ಮತ್ತು ಹಾಲಿನ ಅಭಿಷೇಕ ಮಾಡಿ ಭಕ್ತಿ ಭಾವ ಮೆರೆದರು. ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ, ಶ್ರೀದಂಡಿನ ಮಾರಿಯಮ್ಮ ದೇವಾಲಯ, ಶ್ರೀಕೋಟೆ ಮಾರಿಯಮ್ಮ ದೇವಾಲಯ, ಶ್ರೀಮುತ್ತಪ್ಪ ಸ್ವಾಮಿ ದೇವಾಲಯ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ನಾಗಾರಾಧನೆ ನಡೆಯಿತು. ಕುಶಾಲನಗರ, ಕೂಡಿಗೆ, ಸೋವಾರಪೇಟೆ, ಶನಿವಾರಸಂತೆ, ಗೋಣಿಕೊಪ್ಪ ಸೇರಿದಂತೆ ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ನಾಗರಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: