ಮೈಸೂರು

ಬಡಾವಣೆಗಳನ್ನು ಪರಿಶೀಲಿಸಿದ ಮುಡಾ ಅಧ್ಯಕ್ಷರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ .ಡಿ. ಧ್ರುವಕುಮಾರ್ ರವರು ವಲಯ-3ರ ವ್ಯಾಪ್ತಿಯಲ್ಲಿ ಬರುವ ವಿಜಯನಗರ 3ನೇ ಹಂತ ಮತ್ತು 4ನೇ ಹಂತ 1ನೇ ಘಟ್ಟ ಬಡಾವಣೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಮೈಸೂರು ನಗರದ ವಿಜಯನಗರ 3ನೇ ಹಂತ ‘ಇ ಬ್ಲಾಕ್, ಬಡಾವಣೆಯ ಯು.ಜಿ.ಡಿ ಯ ಮುಚ್ಚಳಗಳು ಹಾಳಾಗಿದ್ದು, ಕಸ ಕಡ್ಡಿಗಳು ಸೇರಿಕೊಂಡು ಒಳಚರಂಡಿಯ ನೀರು ಸರಾಗವಾಗಿ ಹರಿಯಲು ತೊಂದರೆಯಾಗಿರುವುದನ್ನು ಪರಿಶೀಲಿಸಿದರಲ್ಲದೇ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಡಾವಣೆಯ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವ ಬಗ್ಗೆ ಇಲ್ಲಿನ ನಿವಾಸಿಗಳು ತಿಳಿಸಿದ ಹಿನ್ನೆಲೆಯಲ್ಲಿ ಅಗತ್ಯವಿರುವ ಬೀದಿ ದೀಪಗಳನ್ನು ಅಳವಡಿಸಲು ಹಾಗೂ ಹಾಳಾಗಿರುವ ರಸ್ತೆಯನ್ನು ಸರಿಪಡಿಸುವಂತೆ, ಬಡಾವಣೆಯ ಡೆಬ್ರೀಸ್ ಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನೂ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.

ಮೈಸೂರು ನಗರದ ವಿಜಯನಗರ 3ನೇ ಹಂತ ‘ಎಫ್’ ಬ್ಲಾಕ್ ಈ ಬಡಾವಣೆಯಲ್ಲಿ ಪ್ರಾಧಿಕಾರದಿಂದ ರಚಿಸಲಾಗಿರುವ ನಿವೇಶನಗಳ ಪ್ರದೇಶದಲ್ಲಿ ಕೇವಲ ಒಂದು ಕಟ್ಟಡ ನಿರ್ಮಾಣ ವಾಗದಿರುವುದನ್ನು ಗಮನಿಸಿ ಈ ಪ್ರದೇಶದಲ್ಲಿ ಎಷ್ಟು ನಿವೇಶನಗಳನ್ನು ರಚಿಸಲಾಗಿದೆ, ನಿವೇಶನಗಳು ಮಂಜೂರಾಗಿರುವ ಕುರಿತು ಮಾಹಿತಿಯನ್ನು ನೀಡುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಮೈಸೂರು ನಗರದ ವಿಜಯನಗರ 4ನೇ ಹಂತ 1ನೇ ಘಟ್ಟ ಈ ಬಡಾವಣೆಯ ಉದ್ಯಾನವನವನ್ನು ಇಲ್ಲಿನ ನಿವಾಸಿಗಳು ಉಪಯೋಗಿಸಲು ಅನುಕೂಲವಾಗುವಂತೆ ಅಗತ್ಯವಿರುವ ಸೌಕರ್ಯಗಳಾದ ಬೋರ್‍ವೆಲ್ ನಿರ್ವಹಣೆಗೆ, ವಿದ್ಯುತ್ ಮೋಟಾರ್ ವ್ಯವಸ್ಥೆಯನ್ನು, ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಕಲ್ಪಿಸಲು ಹಾಗೂ ಉದ್ಯಾನವನವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಹಾಗೂ ಜನವರಿ ಮೊದಲನೇ ವಾರದೊಳಗೆ ಪೂರ್ಣಗೊಳಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.

ಕಾವೇರಿ ನೀರು ಸರಬರಾಜು ಮಾಡುವಂತೆ ಇಲ್ಲಿನ ನಿವಾಸಿಗಳು ಧ್ರುವ ಕುಮಾರ್ ಅವರನ್ನು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಯವರೊಂದಿಗೆ ಈ ಬಡಾವಣೆಗೆ ಭೇಟಿ ನೀಡಿ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ  ತಿಳಿಸಿದರು.

ಪ್ರಾಧಿಕಾರದ ಮಾಜಿ ಸದಸ್ಯ ಭಾಸ್ಕರ್ ಎಲ್ ಗೌಡ,  ಕಾರ್ಯಪಾಲಕ ಅಭಿಯಂತರ ರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರ ಹೇಮಂತ್ ಕುಮಾರ್, ಮತ್ತಿತರರು ಅಧ್ಯಕ್ಷರ ಜೊತೆಗಿದ್ದರು.

Leave a Reply

comments

Related Articles

error: