ಪ್ರಮುಖ ಸುದ್ದಿ

ಕರ್ನಾಟಕ ಇತಿಹಾಸದಲ್ಲೇ ಐತಿಹಾಸಿಕ ದಾಖಲೆಯ ರಕ್ತದಾನ ಶಿಬಿರ

ರಾಜ್ಯ(ಮಂಡ್ಯ)ಆ.16:-ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ  ವಿವಿಧ ಸಂಘಟನೆಗಳು ಸೇರಿ 72ನೇವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಾಗೂ ಸ್ವಾತಂತ್ರ್ಯಹೋರಾಟಗಾರರಿಗೆ ಮತ್ತು ಹುತಾತ್ಮ ಯೋಧರು ಗಡಿ ಕಾಯುತ್ತಿರುವ ಸೈನಿಕರಿಗೆ ಅರ್ಪಿಸುವ ಸಲುವಾಗಿ ಹಾಗೂ ಅಂದು ಸ್ವಾತಂತ್ರ್ಯಕ್ಕಾಗಿ ಬಲಿದಾನ ಮತ್ತು ಇಂದು ಆರೋಗ್ಯಕ್ಕೆ_ರಕ್ತದಾನ ಸಾವನ್ನೇ ಕಾಣದ ಸ್ವಾತಂತ್ರ್ಯ ಕಲಿಗಳ ಆತ್ಮಕ್ಕೆ ನೀಡುವ ಗೌರವ ಎಂಬ ಧ್ಯೇಯ ವಾಕ್ಯದೊಂದಿಗೆ ಶತ್ರುಗಳ ಗುಂಡಿಗೆ ಎದೆಯೊಡ್ಡಿ ನಿಂತು ದೇಶ ರಕ್ಷಣೆಗೆ ಪ್ರಾಣತೆತ್ತ ಹುತಾತ್ಮ ಯೋಧರ ಸ್ಮರಣಾರ್ಥ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಮಳವಳ್ಳಿ  ನಗರದ ರೋಟರಿ ವಿದ್ಯಾಸಂಸ್ಥೆಯಲ್ಲಿ ಬೃಹತ್ ರಕ್ತ ದಾನ ಶಿಬಿರ ಆಯೋಜಿಸಲಾಗಿತ್ತು. ರಾಜ್ಯದಲ್ಲಿ ಇದುವರೆಗೆ 1030 ಜನ ರಕ್ತ ದಾನಿಗಳು ರಕ್ತದಾನ ಮಾಡಿರುವ ದಾಖಲೆ ಮಾತ್ರವಿದ್ದು, ಈ ದಾಖಲೆ ಮುರಿಯುವ ರೀತಿಯಲ್ಲಿ ವೀರ ಯೋಧರ ಹೆಸರಿನಲ್ಲಿ ಈ ರಕ್ತ ದಾನ ಶಿಬಿರ ಆಯೋಜಿಸಲಾಗಿದ್ದು ಪ್ರಸ್ತುತ 800 ಯೂನಿಟ್  ರಕ್ತ ಸಂಗ್ರಹವಾಗಿದೆ. ಐತಿಹಾಸಿಕದಾಖಲೆಯ ಬೃಹತ್ ರಕ್ತದಾನ_ಶಿಬಿರ”ಕ್ಕೆ ಮಳವಳ್ಳಿ ತಾಲೂಕು ಎಲ್ಲಾ ಯುವಕರು,ರೋಟರಿ ಸಂಸ್ಥೆ, ಮಳವಳ್ಳಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪೊಲೀಸ್ ಇಲಾಖೆ, ತಾಲೂಕು ಆಡಳಿತ, ಆರೋಗ್ಯ ಇಲಾಖೆ ಸೇರಿದಂತೆ ಸಮಾನ ಮನಸ್ಕ ಜನಪರ ಸಂಘಟನೆಗಳು ಮತ್ತು ಹೋರಾಟಗಾರರು ಕೈ ಜೋಡಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: