ಕರ್ನಾಟಕಪ್ರಮುಖ ಸುದ್ದಿ

ಪಶುಭಾಗ್ಯ ಯೋಜನೆ : ಅರ್ಜಿ ಆಹ್ವಾನ

ಮಂಡ್ಯ (ಆ.16): 2018-19ನೇ ಸಾಲಿನಲ್ಲಿ ಪಶುಭಾಗ್ಯ ಯೋಜನೆಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ವಾಣಿಜ್ಯ, ಸಹಕಾರಿ ಬ್ಯಾಂಕುಗಳಿಂದ ರೂ.1.20 ಲಕ್ಷಗಳವರೆಗೆ ಗರಿಷ್ಟ ಸಾಲ ಪಡೆದು ಭೂರಹಿತ, ಸಣ್ಣ, ಅತಿ ಸಣ್ಣ ರೈತರಿಗೆ ಹಸು, ಕುರಿ, ಆಡು, ಹಂದಿ, ಕೋಳಿ ಘಟಕಗಳನ್ನು ಸ್ಥಾಪಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.50 ರಷ್ಟು ಹಾಗೂ ಇತರೆ ಜನಾಂಗದವರಿಗೆ ಶೇ.25ರಷ್ಟು ಬ್ಯಾಕ್‍ಎಂಡೆಡ್ ಸಹಾಯಧನ ಒದಗಿಸಲಾಗುವುದು.

ಪಶುಭಾಗ್ಯ ಯೋಜನೆಯಡಿಯಲ್ಲಿ 2018-19ನೇ ಸಾಲಿಗಾಗಿ ಮಂಡ್ಯ ಜಿಲ್ಲೆಗೆ ಮಹಿಳೆಯರಿಗಾಗಿ ಅಮೃತ ಯೋಜನೆ ಹೈನುಗಾರಿಕೆ ಘಟಕ, ದೇಸಿ ಗಂಡು/ಹೆಣ್ಣುಕರುಗಳ ಸಾಕಾಣೆಕೆ ಘಟಕ, ಕುರಿ/ಮೇಕೆ ಘಟಕ, ಕೋಳಿ ಘಟಕ, ಹಂದಿ ಘಟಕ, ಹಾಗೂ ಎಸ್.ಸಿ.ಪಿ.ಮತ್ತು ಟಿ.ಎಸ್.ಪಿ ಗಳನ್ನು ತಾಲ್ಲೂಕುಗಳಿಗೆ ನಿಗಧಿಯಾಗುವ ಗುರಿಗಳನುಸಾರ ಆಯ್ಕೆ ಮಾಡಲಾಗುವುದು.

2018-19ನೇ ಸಾಲಿನಲ್ಲಿ ಪಶುಭಾಗ್ಯ ಯೋಜನೆಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳಲ್ಲಿ ಸಾಲ ಪಡೆಯಲು ಇಚ್ಛಿಸುವ ಮಂಡ್ಯ ಜಿಲ್ಲೆಯ ಅರ್ಹಫಲಾಪೇಕ್ಷಿಗಳು ಸಂಬಂಧಪಟ್ಟ ತಾಲ್ಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಿಂದ ಅರ್ಜಿಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 15 ರೊಳಗೆ ಹತ್ತಿರದ ಪಶುವೈದ್ಯಕೀಯ ಸಂಸ್ಧೆಗಳಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಇಲಾಖೆಯ ಹತ್ತಿರದ ಪಶುವೈದ್ಯ ಸಂಸ್ಥೆ, ತಾಲ್ಲೂಕು ಸಹಾಯಕ ನಿರ್ದೇಶಕರು ಅಥವಾ ಜಿಲ್ಲಾ ಉಪ ನಿರ್ದೇಶಕರವರನ್ನು ಸಂರ್ಪಕಿಸುವುದು.(ಎನ್.ಬಿ)

Leave a Reply

comments

Related Articles

error: