ಕರ್ನಾಟಕಮೈಸೂರು

ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ನಂಜನಗೂಡು ಉಪಚುನಾವಣಾ ಬಿಜೆಪಿ ಅಭ್ಯರ್ಥಿ..!

ನಿರೀಕ್ಷೆಯಂತೆ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಬಿಜೆಪಿ ತಕ್ಕೆಗೆ ಸೇರಲಿದ್ದು ಮುಂಬರುವ ನಂಜನಗೂಡು ಉಪ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸುವುದು ಖಚಿತವಾಗಿದೆ.

ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುವ ದಿನಾಂಕ ನಿಗದಿಯಾಗಿಲ್ಲ. ಮಾಜಿ ಸಚಿವರ ಆಪ್ತರಾದ ಮುಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್ ಬಿಜೆಪಿ ಮುಖಂಡರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದು ದಿನಾಂಕ ಅಧಿಕೃತವಾಗುವುದು ಬಾಕಿ ಇದೆ.

ಸಚಿವ ಸ್ಥಾನದಿಂದ ಕೆಳಗಿಳಿದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವ್ಯಕ್ತಿಗತ ಹಾಗೂ ದಬ್ಬಾಳಿಕೆ  ರಾಜಕಾರಣದಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಬಿಜೆಪಿಯತ್ತ ಒಲವು ತೋರಿದ್ದರು. ಕಾರ್ಯಕರ್ತರ ಹಾಗೂ ಬೆಂಬಲಿಗರ ಒತ್ತಾಸೆ ಹಾಗೂ ಸಲಹೆಯನ್ನು ಪರಿಗಣಿಸಿ ಪಕ್ಷವನ್ನು ಆಯ್ಕೆ ಮಾಡಲಾಗುವುದು ಎನ್ನುವ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.

ವಿ.ಶ್ರೀನಿವಾಸ ಪ್ರಸಾದ್‍ರವರನ್ನು ಸೆಳೆಯಲು ಜೆಡಿಎಸ್, ಸಮಾಜವಾದಿ ಹಾಗೂ ಇತರೆ ಪಕ್ಷಗಳು ಪ್ರಯತ್ನ ನಡೆಸಿದ್ದವು. ಆದರೆ, ಕುಟುಂಬದವರ ಆಸೆಯಂತೆ ಬಿಜೆಪಿಯನ್ನು ಸೇರಲಿದ್ದು ಉಪ ಚುನಾವಣೆಯ ಅಧಿಕೃತ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿದೆ.

Leave a Reply

comments

Related Articles

error: