
ಮನರಂಜನೆ
ಸಿಎಂ ಜತೆ ನಟ ಪ್ರೇಮ್ ಸೆಲ್ಫಿ
ಬೆಂಗಳೂರು,ಆ.16-ದಿನಕರ್ ತೂಗುದೀಪ ನಿರ್ದೇಶನದಲ್ಲಿ ಮೂಡಿಬಂದಿರುವ `ಲೈಫ್ ಜತೆ ಒಂದ್ ಸೆಲ್ಫಿ’ ಸಿನಿಮಾ ಪ್ರಚಾರದಲ್ಲಿ ಚಿತ್ರತಂಡ ತೊಡಗಿದೆ. ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿರುವ ನಟ ಲವ್ಲಿಸ್ಟಾರ್ ಪ್ರೇಮ್ ಸಿನಿಮಾ ಪ್ರಚಾರವನ್ನು ಡಿಫರೆಂಟ್ ಆಗಿ ಮಾಡುತ್ತಿದ್ದಾರೆ.
ಪ್ರೇಮ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.
ಕುಮಾರಸ್ವಾಮಿ ಅವರಿಗೆ ಸಿನಿಮಾಗಳ ಬಗ್ಗೆ ಅಪಾರ ಆಸಕ್ತಿಯಿದೆ. ಹಾಗಾಗಿ ನಮ್ಮ ಟೀಮ್ ಅವರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ ಚಿತ್ರಕ್ಕೆ ಮನಸಾರೆ ಹಾರೈಸಿದರು. ಇಂತಹ ಅನೇಕ ಸರ್ಪ್ರೈಸ್ಗಳಿಗೆ ಸಿನಿಮಾ ಕೂಡ ಸಾಕ್ಷಿ ಆಗುತ್ತದೆ. ಹಾಗಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡೆವು ಎಂದಿದ್ದಾರೆ ಪ್ರೇಮ್.
ಸಾಕಷ್ಟು ನೆನಪುಗಳಿಗೆ ಸಾಕ್ಷಿ ಆಗುತ್ತಿರುವ ಸೆಲ್ಫಿಯ ಕುರಿತಾದ ಸಿನಿಮಾ ಇದಾಗಿದೆ. ಹರಿಪ್ರಿಯಾ ಮತ್ತು ಪ್ರಜ್ವಲ್ ದೇವರಾಜ್ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಈ ತಿಂಗಳು ರಿಲೀಸ್ ಆಗಲಿದೆ. (ಎಂ.ಎನ್)