ಮೈಸೂರು

ಶ್ರೀ ರಾಮಕೃಷ್ಣ ಪರಮಹಂಸ ಅವರ 132ನೇ ಪುಣ್ಯ ಸ್ಮರಣೆ ಅಂಗವಾಗಿ ಆಧ್ಯಾತ್ಮಿಕ ಜಗತ್ತು ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು,ಆ.16:- ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ರಾಮಕೃಷ್ಣ ನಗರ ನಿವಾಸಿಗಳ ಬಳಗದ ವತಿಯಿಂದ ಶ್ರೀ ರಾಮಕೃಷ್ಣ ಪರಮಹಂಸ ಅವರ 132ನೇ ಪುಣ್ಯ ಸ್ಮರಣೆ ಅಂಗವಾಗಿ ಆಧ್ಯಾತ್ಮಿಕ ಜಗತ್ತು ಕಾರ್ಯಕ್ರಮವನ್ನು ರಾಮಕೃಷ್ಣ ವೃತ್ತ (ಆಂದೋಲನ ವೃತ್ತ) ದಲ್ಲಿ ಶ್ರೀ ರಾಮಕೃಷ್ಣ ಪರಮಹಂಸ ರವರ ಪ್ರತಿಮೆಗಿಂದು ನಗರಪಾಲಿಕೆ ಸದಸ್ಯ ಎಂ.ಕೆ. ಶಂಕರ್ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು  ಈ ವೃತ್ತದಲ್ಲಿದ್ದ ತೊಡಕುಗಳನ್ನು ನಿವಾರಿಸಿ ಶ್ರೀರಾಮ ಕೃಷ್ಣ ಪರಮಹಂಸ ಪ್ರತಿಮೆಯನ್ನು ಸ್ಥಾಪಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ದೇಶ ವಿದೇಶಗಳಿಂದ ಆಗಮಿಸಿದ್ದ ಪ್ರವಾಸಿಗರು ರಾಮಕೃಷ್ಣ ಪರಮಹಂಸರ ಪ್ರತಿಮೆಯ ವೀಕ್ಷಣೆ ಮಾಡುತ್ತಿದ್ದು ಪ್ರವಾಸಿಗರು ಹೆಚ್ಚಾಗುತ್ತಿದ್ದಾರೆ ಎಂದರು.

ಆಧ್ಯಾತ್ಮ ಜಗತ್ತಿನ ವಿಚಾರವಾಗಿ ಹಿರಿಯ ಸಮಾಜ ಸೇವಕ ಡಾ. ಕೆ. ರಘುರಾಮ್ ವಾಜಪೇಯಿ ಮಾತನಾಡಿ ಸಾಂಸ್ಕೃತಿಕ ರಾಜಧಾನಿ ಮೈಸೂರು ಪಾರಂಪರಿಕ ಇತಿಹಾಸ ಹೊಂದಿದ್ದು ಸ್ವಚ್ಛತೆಯ ಪರಿಸರದಿಂದ ಕೂಡಿದೆ. ಆಧ್ಯಾತ್ಮಿಕವಾಗಿ ಆಕರ್ಷಣೀಯವಾಗಿದೆ. ಸಹಸ್ರಾರು ಹಿರಿಯ ನಾಗರೀಕರು ವಾಯು ವಿಹಾರಕ್ಕೆ ಇಲ್ಲಿಗೆ ಬರುತ್ತಾರೆ.  ಅನೇಕ ವರ್ಷಗಳಿಂದ ಇಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಪ್ರತಿಮೆ ಸ್ಥಾಪಿಸಬೇಕೆಂದು ಬೇಡಿಕೆ ಇತ್ತು. ಕಳೆದ 6 ತಿಂಗಳುಗಳ ಹಿಂದೆ ತಡವಾಗಿ ಸ್ಥಾಪನೆ ಗೊಂಡಿದ್ದರೂ ಅದ್ಭುತವಾಗಿ ಸ್ಥಾಪನೆಗೊಂಡಿರುವುದು ಮೈಸೂರು ಜನತೆಗೆ ಸಂತೋಷ ತರುವ ವಿಚಾರವಾಗಿದೆ. ಏಕ ಶಿಲೆಯ ಶಿಲಾನ್ಯಾಸವನ್ನು ರಾಮಕೃಷ್ಣ ಮಠದ ಮಾರ್ಗದರ್ಶನದಲ್ಲಿ ನಿರ್ಮಿಸಿದ್ದು ಸಂಗೀತ ಕಾರ್ಯಕ್ರಮಗಳನ್ನು ನಿರಂತವಾಗಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ.  ವಿವೇಕಾನಂದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ, ರಾಮಕೃಷ್ಣ ನಗರ ವೃತ್ತದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಪ್ರತಿಮೆ ಸ್ಥಾಪಿಸಲಾಗಿದೆ. ಶಾರದಾ ದೇವಿ ನಗರದ ವೃತ್ತದಲ್ಲಿ ಶ್ರೀ ಶಾರದಾದೇವಿ ಪ್ರತಿಮೆಯನ್ನು ಸ್ಥಾಪಿಸಿ ಜನರಲ್ಲಿ/ವಿದ್ಯಾರ್ಥಿಗಳಲ್ಲಿ/ಯುವ ಪೀಳಿಗೆಯಲ್ಲಿ  ಇವರುಗಳ ಆದರ್ಶವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕೆಂದು ತಿಳಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯಾದರ್ಶಿ ನಂ. ಶ್ರೀಕಂಠಕುಮಾರ್ ಮಾತನಾಡಿ ಭಾರತದಲ್ಲಿ ರಾಷ್ಟ್ರೀಯ ಯುವ ದಿನೋತ್ಸವವನ್ನು ಸ್ವಾಮಿ ವಿವೇಕಾನಂದರ ಹುಟ್ಟು ಹಬ್ಬವನ್ನಾಗಿ ಆಚರಿಸುತ್ತೇವೆ.  ಆದರೆ ನರೇಂದ್ರರನ್ನು ಆಧ್ಯಾತ್ಮಿಕವಾಗಿ ವಿವೇಕಾನಂದರನ್ನಾಗಿ ಸೃಷ್ಟಿಸಿದ ರಾಮಕೃಷ್ಣ ಪರಮಹಂಸರ ಸ್ಮರಣೆಯನ್ನು ಕಡೆಗಣಿಸಿದ್ದೇವೆ.  ಮನುಷ್ಯ ಆಧ್ಯಾತ್ಮಿಕ ಚಿಂತನೆ ಮಾಡಿದರೆ ಬದುಕು ಸುಂದರವಾಗಿರುತ್ತದೆ ಎಂಬ ಸಂದೇಶವನ್ನು ನೀಡಿದರು.   ಈ ಕಾರ್ಯಕ್ರಮದಲ್ಲಿ  ಬಿ.ಜೆ.ಪಿ. ಯುವ ಮುಖಂಡರಾದ ನವೀನ್ ಕುಮಾರ್, ಅಪೂರ್ವ ಸುರೇಶ್, ಮಂಜುನಾಥ್, ಯೋಗಾ ನರಸಿಂಹ (ಯೋಗಾಮಾಮ)  ಗಿರೀಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಶ್ರೀಧರ್ ಮೂರ್ತಿ, ಉಪಾಧ್ಯಕ್ಷರಾದ ಮುಳ್ಳೂರು ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಜಯಸಿಂಹ, ರಂಗನಾಥ್,  ರಾಮಕೃಷ್ಣ ಬಡಾವಣೆ ನಿವಾಸಿಗಳಾದ ಫಣೀಶ್, ಮಂಜುನಾಥ್, ರವೀಂದ್ರ , ರಂಗನಾಥ್ ಕಶ್ಯಪ್, ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: