ಮನರಂಜನೆ

ಶೂಟಿಂಗ್ ವೇಳೆ ಕೈ ಮುರಿದುಕೊಂಡ ನಟಿ ಅಮಲಾ ಪೌಲ್

ಕೇರಳ,ಆ.16-ಚಿತ್ರೀಕರಣದ ವೇಳೆ ನಟಿ ಅಮಲಾ ಪೌಲ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರಳದಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ಅಮಲಾ ಪೌಲ್ ಬಲಗೈ ಮಣಿಕಟ್ಟಿಗೆ ಗಾಯ ಮಾಡಿಕೊಂಡಿದ್ದಾರೆ.

‘ಅಧೋ ಅಂಧ ಪರವೈ ಪೊಲಾ’ ಚಿತ್ರದ ಶೂಟಿಂಗ್‌ನಲ್ಲಿ ಕೈಯನ್ನು ತಿರುಗಿಸುವ ಆ್ಯಕ್ಷನ್ ಸನ್ನಿವೇಶದಲ್ಲಿ ಮೂಳೆಕಟ್ಟು ಮುರಿದಿದೆ. ಮೊದ ಮೊದಲಿಗೆ ಕೈ ಉಳುಕಿದೆ ಎಂದು ಭಾವಿಸಿ ಚಿತ್ರತಂಡ ಪ್ರಥಮ ಚಿಕಿತ್ಸೆ ನೀಡಿ ಚಿತ್ರೀಕರಣ ಮುಂದುವರೆಸಿತ್ತು.

 

ಆದರೆ ಸ್ವಲ್ಪ ಸಮಯಕ್ಕೆ ನೋವು ಹೆಚ್ಚಾದ ಕಾರಣ ಶೂಟಿಂಗ್ ಕ್ಯಾನ್ಸಲ್ ಮಾಡಿ ಅಮಲಾ ಪೌಲ್‌ರನ್ನು ಆಸ್ಪತ್ರೆಗೆ ದಾಖಲಿಸಿದರು. ಕೈಗೆ ಬ್ಯಾಂಡೇಜ್ ಹಾಕಲಾಗಿದ್ದು ಸ್ವಲ್ಪ ದಿನ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಸದ್ಯಕ್ಕೆ ಕೇರಳದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಬಲಗೈಗೆ ಗಾಯವಾಗಿರುವ ಕಾರಣ ಎಡಗೈನಲ್ಲೇ ಟೈಪಿಸಿ ಟ್ವಿಟ್ ಮಾಡಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ನಿಮ್ಮೆಲ್ಲರ ಹಾರೈಕೆಯಿಂದ ಈಗ ಇನ್ನಷ್ಟು ಬೇಗವಾಗಿ ಚೇತರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಅಮಲಾ ಪೌಲ್. (ಎಂ.ಎನ್)

Leave a Reply

comments

Related Articles

error: