ಸುದ್ದಿ ಸಂಕ್ಷಿಪ್ತ

ಆ.18 ರಂದು ಎನ್ಐಇ ಕಾಲೇಜಿನಲ್ಲಿ 8ನೇ ಪದವಿ ಪ್ರದಾನ ಸಮಾರಂಭ

ಮೈಸೂರು,ಆ.16-ದಿ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್ಐಇ) ಕಾಲೇಜಿನಲ್ಲಿ ಆ.18 ರಂದು ಮಧ್ಯಾಹ್ನ 12 ಗಂಟೆಗೆ ಡೈಮಂಡ್ ಜ್ಯೂಬಿಲಿ ಒಳಂಗಾಣ ಕ್ರೀಡಾಂಗಣದಲ್ಲಿ 8ನೇ ಪದವಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ.

ಸಮಾರಂಭದಲ್ಲಿ ತನ್ನ ಸ್ವಾಯತ್ತತೆಯ ಅಡಿಯಲ್ಲಿ 1045 ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪದವಿ ಪ್ರಮಾಣವನ್ನು ಪ್ರದಾನ ಮಾಡಲಾಗುವುದು. 39 ಇಂಜಿನಿಯರಿಂಗ್, 20 ಎಂಟೆಕ್, 3 ಎಂಸಿಎ ನಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಹಾಗೂ ಪಿಎಚ್ ಡಿ ಪಡೆದ 7 ಮಂದಿ ಸಂಶೋಧಕರು ಚಿನ್ನದ ಪದಕವನ್ನು ಸ್ವೀಕರಿಸಲಿದ್ದು, 39 ಮಂದಿ ವಿದ್ಯಾರ್ಥಿಗಳು ದತ್ತಿ ಪ್ರಶಸ್ತಿಗಳನ್ನು ಪಡೆಯಲಿದ್ದಾರೆ.

ನವದೆಹಲಿಯ ಆಲ್ ಇಂಡಿಯಾ ಕೌನಿಲ್ಸ್ ಫಾರ್ ಟೆಕ್ನಿಕಲ್ ಎಡ್ಯುಕೇಷನ್ ನ ವೈಸ್ ಛೇರ್ಮನ್ ಡಾ.ಎಂ.ಪಿ.ಪೂನಿಯ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಿದ್ದಾರೆ. ಎನ್ಐಇ ವಿದ್ಯಾಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಪವರ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಕನ್ಸಲ್ಟಂಟ್ ಪ್ರೈವೆಟ್ ಲಿಮಿಟೆಡ್ ನ ನಿರ್ದೇಶಕರಾದ ಡಾ.ಆರ್.ನಾಗರಾಜ ಗೌರವ ಅತಿಥಿಯಾಗಿ ಆಗಮಿಸಲಿದ್ದು ಚಿನ್ನದ ಪದಕಗಳು ಹಾಗೂ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಎನ್ಐಇ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಾಥ್ ಬಾಟ್ನಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: