ಮೈಸೂರು

ಆ.19ರಂದು ಹಂಸಲೇಖರವರ ಭರತನಾಟ್ಯ ರಂಗಪ್ರವೇಶ

ಮೈಸೂರು,ಆ.16 : ಕಲಾನಿಧಿ ನೃತ್ಯ ಶಾಲೆಯ ವಿದ್ಯಾರ್ಥಿನಿ ಕೆ.ಎಲ್. ಹಂಸಲೇಖರ ಭರತನಾಟ್ಯ ರಂಗಪ್ರವೇಶವನ್ನು ಕಲಾಮಂದಿರದಲ್ಲಿ, ಇದೇ ದಿ.19ರ ಸಂಜೆ 5.30ಕ್ಕೆ ಆಯೋಜಿಸಲಾಗಿದೆ ಎಂದು ಶಾಲೆಯ ಮುಖ್ಯಸ್ಥೆ ಹಾಗೂ ಭರತನಾಟ್ಯ ಗುರುವಾದ ಪದ್ಮಶ್ರಿಯವರು ತಿಳಿಸಿದರು.

ಗುರುವಾರ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಮೂಲತಃ ಮಂಡ್ಯ ಜಿಲ್ಲೆಯ ಕನಗನಹಳ್ಳಿಯ ಸವಿತಾ ಮತ್ತು ಲಕ್ಷ್ಮೇ ಗೌಡರ ಪುತ್ರಿಯಾದ ಹಂಸಲೇಖ  ಕಳೆದ 5 ವರ್ಷಗಳಿಂದಲೂ ತಮ್ಮಲ್ಲಿಯೇ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು, ಅತಿ ಆಸಕ್ತಿಯಿಂದ ಕಡಿಮೆ ಅವದಿಯಲ್ಲಿಯೇ ರಂಗಪ್ರವೇಶಕ್ಕೆ ಬೇಕಾದ ಎಲ್ಲಾ ಕೌಶಲ್ಯಗಳನ್ನು ಕರಗತ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿತ್ರಕಲಾ ಕಲಾ ಶಾಲೆ ಬೆಂಗಳೂರು ಇದರ ನಿರ್ದೇಶಕ ಪಿ.ಪ್ರವೀಣ್ ಕುಮಾರ್, ನೃತ್ಯಗಿರಿ ಪ್ರದರ್ಶಕ ಕಲೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥೆ ವಿದುಷಿ ಕೃಪಾ ಪಡ್ಕೆ, ದರ್ಶನ್ ಪಟ್ಟಣ್ಣಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಹೆಚ್.ಚನ್ನಪ್ಪ ಹಾಗೂ ಪೋಷಕರು ಹಾಜರಿರುವರು ಎಂದು ತಿಳಿಸಿದರು.

ಹಂಸಲೇಖ, ಲಕ್ಷ್ಮೇಗೌಡ ಸುದ್ದಿಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: