ಸುದ್ದಿ ಸಂಕ್ಷಿಪ್ತ

ಆ.18ರಂದು ಶುಶ್ರೂಷಕರ ಹಬ್ಬ

ಮೈಸೂರು,ಆ.16 : ಸರ್ಕಾರಿ ಶುಶ್ರೂಷಕರ ಸಂಘದ ಜಿಲ್ಲಾ ಘಟಕದಿಂದ ಶುಶ್ರೂಷಕರ ಹಬ್ಬ, ಹತ್ತನೇ ವರ್ಷದ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಾಗೂ ವಿಚಾರ ಸಂಕಿರಣವನ್ನು ಆ.18ರ ಸಂಜೆ 4 ಗಂಟೆಗೆ ಜೆ.ಕೆ. ಮೈದಾನದ ಎಂ.ಎಂ.ಸಿ ಅಂಡ್ ಆರ್. ಐ ಅಲ್ಯುಮಿನಿ ಸಭಾಂಗಣದಲ್ಲಿ ಆಯೋಜಿಸಿದೆ.

ಜಿಲ್ಲಾ ಉಸ್ತುವಾರಿ ಜಿ.ಟಿ.ದೇವೇಗೌಡ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪ್ರಶಸ್ತಿ ಪ್ರದಾನ ಮಾಡುವರು. ಶಾಸಕ ನಾಗೇಂದ್ರ, ಮಾಜಿ ಶಾಸಕ ವಾಸು, ಎಂಎಂಸಿ ಅಂಡ್ ಆರ್. ಐ ನಿರ್ದೇಶಕ ಡಾ.ಸಿ.ಪಿ.ನಂಜರಾಜ್, ಡಾ.ಬಿ.ಬಸವರಾಜ್ ವಿವಿಧ ಪ್ರಶಸ್ತಿ ಪ್ರದಾನ ಮಾಡುವರು.

ಬೆಳಗ್ಗೆ 9 ರಿಂದ ವಿಚಾರ ಸಂಕಿರಣ, ಸರ್ಕಾರಿ ಶುಶ್ರೂಷ ಶಾಲೆಯ ಪ್ರಭಾರ ಪ್ರಾಂಶುಪಾಲ ಹೆಲನ್ ಡಿ’ಸಿಲ್ವ ಉದ್ಘಾಟಿಸುವರು. (ಕೆ.ಎಂ.ಆರ್)

 

Leave a Reply

comments

Related Articles

error: