ಮೈಸೂರು

ಮಾಜಿ ಪ್ರಧಾನಿ ಅಟಲ್ ಜೀ ಅವರನ್ನು ಕಳೆದುಕೊಂಡಿರುವುದು ತಂದೆಯನ್ನು ಕಳೆದುಕೊಂಡಷ್ಟೇ ನೋವಾಗಿದೆ : ಕೆ.ಎಸ್.ಈಶ್ವರಪ್ಪ

ಮೈಸೂರು,ಆ.16:-  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕಳೆದುಕೊಂಡಿರುವುದು ನಮ್ಮ ತಂದೆಯನ್ನೇ‌ ಕಳೆದುಕೊಂಡಷ್ಟೇ  ನೋವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು ವಾಜಪೇಯಿ ಅವರು ಸಾಮಾನ್ಯ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದ್ದರು. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಜೊತೆ ಬೆರೆಯುತ್ತಿದ್ದರು. ನಾನು ಅವರಿಂದ ಕಾರ್ಯಕರ್ತರ ಜೊತೆ ಬೆರೆಯುವುದನ್ನು ಕಲಿತೆ. ಅವರ ಅಗಲಿಕೆ ನಮಗೆಲ್ಲಾ ನೋವು ತಂದಿದೆ. ವಾಜಪೇಯಿ ಅವರು ದೇಶಕ್ಕೆ ಮಾತ್ರ ನಾಯಕರಾಗಿರಲಿಲ್ಲ. ಅವರು ಇಡೀ ವಿಶ್ವಕ್ಕೆ ನಾಯಕರಾಗಿದ್ದರು. ವಾಜಪೇಯಿಯವರು ದೇಶ ಮೊದಲು,ಆಮೇಲೆ ಪಕ್ಷ ಎನ್ನುತ್ತಿದ್ದರು. ಸಭೆ ಸಮಾರಂಭಕ್ಕೆ ಕಾರಿನಲ್ಲಿ ಬರುತ್ತಿದ್ದರು. ಶಿವಮೊಗ್ಗದಲ್ಲಿ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದು ಖುಷಿ ತಂದಿದೆ ಎಂದಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: