ಮೈಸೂರು

ವಿಕಲತೆಯುಳ್ಳ ವ್ಯಕ್ತಿಗಳ ಹಕ್ಕುಗಳ ಮಸೂದೆ ಅರಿವು ಕಾರ್ಯಕ್ರಮ

ಮೈಸೂರಿನ ವಿಕಲ ವಿಕಾಸ ವತಿಯಿಂದ ರಾಷ್ಟ್ರಪಿತನಿಗೆ ನಮನ ಮತ್ತು ವಿಕಲತೆಯುಳ್ಳ ವ್ಯಕ್ತಿಗಳ ಹಕ್ಕುಗಳ ಮಸೂದೆ 2014 ರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಗಾಂಧಿ ಚೌಕದಲ್ಲಿ ನಡೆದ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ನ ಉಪಾಧ್ಯಕ್ಷ ಸೀತಾರಾಂ ಉದ್ಘಾಟಿಸಿದರು. ಈ ಸಂದರ್ಭ ಸತ್ಯಮಾರ್ಗದಲ್ಲಿ ಅರಿವು ಮೂಡಿಸುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ವಿಕಲಚೇತನರು ಸಮಾನತೆಯ ಹಕ್ಕುಗಳು, ಘನತೆಯ ಜೀವನ, ಏಕತೆಯ ಗೌರವ ಹಾಗೂ ಇತರರು ಸಮಾನರು, ಸಮುಚ್ಛಿತ ಸರ್ಕಾರಗಳ ಕರ್ತವ್ಯಗಳು ಹಾಗೂ ಜವಾಬ್ದಾರಿಯನ್ನು ದಾಖಲು ಮಾಡುವುದು, ಸಮುಚ್ಛಿತ ಸರ್ಕಾರದಡಿಯ ಶಿಕ್ಷಣ ಸಂಸ್ಥೆಗಳು ವಿಕಲತೆಯುಳ್ಳ ಮಕ್ಕಳಿಗೆ ಸಮನ್ವಯ ಶಿಕ್ಷಣ ಒದಗಿಸುವುದು ವಿಕಲಚೇತನರಿಗೆ ಆರ್ಥಿಕ ಸಬಲೀಕರಣಕ್ಕಾಗಿ ರಾಷ್ಟ್ರೀಯ ನಿಧಿ ಸ್ಥಾಪನೆ ಸೇರಿದಂತೆ 117 ಪರಿಚ್ಛೇದಗಳು 2014ರ ಕಾಯ್ದೆಯಲ್ಲಿ ಒಳಗೊಂಡಿದ್ದು, ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಕಾಯ್ದೆ ಆಶಾದಾಯಕ ಎನ್ನುವ ಕುರಿತು ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ವಿಕಲಚೇತನ ಒಕ್ಕೂಟದ ಅಧ್ಯಕ್ಷ ರಾಚಪ್ಪ, ಕಾರ್ಯಕ್ರಮ ಸಂಚಾಲಕ ಮುರಳೀಧರ, ಟ್ರಸ್ಟಿ ವೈದ್ಯನಾಥ, ಅಧ್ಯಕ್ಷ ಮುನಿರಾಜು ಹಾಗೂ ನೂರಾರು ವಿಕಲಚೇತನರು ಉಪಸ್ಥಿತರಿದ್ದರು.

Leave a Reply

comments

Related Articles

error: