
ದೇಶಪ್ರಮುಖ ಸುದ್ದಿ
ತಮಿಳುನಾಡು ಮುಖ್ಯ ಕಾರ್ಯದರ್ಶಿ ರಾಮ್ ಮೋಹನ್ ರಾವ್ ಮನೆ ಮೇಲೆ ಐಟಿ ದಾಳಿ
ತಮಿಳುನಾಡು ಮುಖ್ಯ ಕಾರ್ಯದರ್ಶಿ ರಾಮ್ ಮೋಹನ್ ರಾವ್ ಅವರ ಚೆನ್ನೈನಲ್ಲಿರುವ ನಿವಾಸಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಅಪಾರ ಪ್ರಮಾಣದ ನಗ, ನಗದು ವಶಪಡಿಸಿಕೊಂಡಿದ್ದಾರೆ.
ಈ ತಿಂಗಳಾರಂಭದಲ್ಲಿ ಐಟಿ ದಾಳಿಗೊಳಲಾಗಿದ್ದ ಕೈಗಾರಿಕೋದ್ಯಮಿ ಶೇಖರ್ ರೆಡ್ಡಿಯೊಂದಿಗೆ ಎಐಎಡಿಎಂಕೆ ಕಾರ್ಯದರ್ಶಿ ರಾವ್ ನಿಕಟ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಶೇಖರ್ ರೆಡ್ಡಿ ಮನೆಯಲ್ಲಿ 34 ಕೋಟಿ ಮೌಲ್ಯದ ಹೊಸ 2000 ನೋಟುಗಳು ಸೇರಿ ಸುಮಾರು 154 ಕೋಟಿ ರೂ. 167 ಕೆಜಿ ಚಿನ್ನಾಭರಣಗಳು ಪತ್ತೆಯಾಗಿತ್ತು. ನೋಟು ನಿಷೇಧದ ಬಳಿಕ ಪತ್ತೆಯಾದ ಬಹು ದೊಡ್ಡ ಪ್ರಕರಣ ಇದಾಗಿತ್ತು. ಈ ದಾಳಿ ವೇಳೆ ರಾಮ್ ಮೋಹನ್ ರಾವ್ ಅವರ ಅಕ್ರಮದ ಬಗ್ಗೆ ಸುಳಿವು ಸಿಕ್ಕಿತ್ತು.
ಬುಧವಾರ ಬೆಳಗ್ಗೆ 5.30 ರ ಸುಮಾರಿಗೆ ದಾಳಿ ಆರಂಭಿಸಿದ ಐಟಿ ಅಧಿಕಾರಿಗಳು, ರಾಮ್ ಮೋಹನ್ ರಾವ್ ಅವರ ಮನೆ, ಕಚೇರಿ, ಪುತ್ರ ಮತ್ತು ಸಂಬಂಧಿಕರ ನಿವಾಸ ಸೇರಿ 13 ಕಡೆ ಏಕ ಕಾಲದಲ್ಲಿ ಪರಿಶೀಲನೆ ನಡೆಸಿದ್ದಾರೆ.