
ಮೈಸೂರು
ಮಾಜಿ ಪ್ರಧಾನಿ ಅಟಲ್ ಜೀ ಅವರ ಶ್ರದ್ಧಾಂಜಲಿ : ಶ್ರೀರಾಮನಿಗೆ ದೀಪ ಸಮರ್ಪಣೆ ನಾಳೆ
ಮೈಸೂರು,ಆ.17 : ಈಚೆಗೆ ನಿಧನರಾದ ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಶ್ರದ್ದಾಂಜಲಿ ಹಿನ್ನಲೆಯಲ್ಲಿ ಶ್ರೀರಾಮನಿಗೆ ಸಂಕಲ್ಪಸಹಿತ ದೀಪ ಸಮರ್ಪಿಸುವ ಕಾರ್ಯಕ್ರಮವನ್ನು ಸರಸ್ವತಿಪುರಂನ ವಿಪ್ರ ಪರಿಷತ್ ವತಿಯಿಂದ ಆ.18ರ ಸಂಜೆ 5.30ಕ್ಕೆ ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ ಆಯೋಜಿಸಲಾಗಿದೆ.
ವಿಪ್ರ ಸಮುದಾಯದ ಮುಖಂಡರು ಭಾಗವಹಿಸುವರು ಎಂದು ಕಾರ್ಯದರ್ಶಿ ವೆಂಕಟರಾಮ್ ಕಶ್ಯಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.