ಮೈಸೂರು

ಹಿನಕಲ್ ರಿಂಗ್ ರಸ್ತೆ ಮತ್ತು ಹುಣಸೂರು ರಸ್ತೆಯ ಜಂಕ್ಷನ್ ನ ನೂತನ ಮೇಲ್ಸೇತುವೆಗೆ ಅಟಲ್ ಜೀ ಹೆಸರಿಡಿ

ಮೈಸೂರು,ಆ.17:- ಮೈಸೂರಿನ ಹಿನಕಲ್ ರಿಂಗ್ ರಸ್ತೆ ಮತ್ತು ಹುಣಸೂರು ರಸ್ತೆಯ ಜಂಕ್ಷನ್ ನ ನೂತನ ಮೇಲ್ಸೇತುವೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಹೆಸರಿಡಬೇಕೆಂದು ಒತ್ತಾಯಿಸಿ ಕೇಂದ್ರ ಮತ್ತು ರಾಜ್ಯಸರ್ಕಾರಗಳಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಮನವಿ ಮಾಡಿದ್ದಾರೆ.

ಅಟಲ್ ಜೀ ಯವರು ಅಜಾತ ಶತ್ರುವಾಗಿದ್ದು ದೇಶದ ಅಭಿವೃದ್ಧಿಗೆ ಪೂರಕವಾದ ರಸ್ತೆಗಳ ಮತ್ತು ಮೇಲ್ಸೇತುವೆಗಳನ್ನು ದೇಶಾದ್ಯಂತ ನಿರ್ಮಿಸಿ “ಭಾರತ ಪ್ರಕಾಶಿಸುತ್ತಿದೆ” ಎಂಬ ವಾಕ್ಯ ಘೋಷಣೆ ಮಾಡಿದ್ದರು. ಆದ್ದರಿಂದ ಮೈಸೂರಿನ ಪ್ರಪ್ರಥಮ ಮೇಲ್ಸೇತುವೆಗೆ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ ಹೆಸರನ್ನಿಟ್ಟು ಆದರ್ಶ ಮೆರೆಯಬೇಕೆಂದು ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: