ಪ್ರಮುಖ ಸುದ್ದಿಮನರಂಜನೆ

‘ಕನಸಿನ ಕನ್ಯೆ’ ಹೇಮಾಮಾಲಿನಿ ನಟಿಸಿದ ಈ ಚಿತ್ರ ’25’ಬಾರಿ ನೋಡಿದ್ದರಂತೆ ‘ಅಟಲ್ ಜೀ’!

ದೇಶ(ನವದೆಹಲಿ)ಆ.17:- ದೇಶ ಕಂಡ   ಅಪ್ರತಿಮನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ. ಬಾಲಿವುಡ್  ಕೂಡ ಅವರ ನಿಧನಕ್ಕೆ ಶೋಕವನ್ನಾಚರಿಸಿದೆ. ಖ್ಯಾತ ನಟ-ನಟಿಯರು ಟ್ವೀಟ್ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಬಾಲಿವುಡ್ ಕೂಡ ಅಟಲ್ ಜೀ ನಿಧನದ ಶೋಕದಿಂದ ಹೊರತಾಗಿಲ್ಲ. ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಕಿಂಗ್ ಖಾನ್ ಶಾರೂಖ್ ಅಟಲ್ ಜೀ ಅವರೊಂದಿಗಿನ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಂಡಿದ್ದಾರೆ. ಅದೇ ರೀತಿ ಡ್ರೀಮ್ ಗರ್ಲ್ ಎಂದೇ ಕರೆಸಿಕೊಂಡ ನಟಿ, ಸಂಸದೆ ಹೇಮಾಮಾಲಿನಿ ಕೂಡ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅಟಲ್ ಜೀ ಮತ್ತು ಹೇಮಾಮಾಲಿಯವರ ಭೇಟಿಯ ವೇಳೆ ಹೇಮಾಮಾಲಿನಿ ಸ್ವಲ್ಪ ನರ್ವಸ್ ಆಗಿದ್ದರಂತೆ. ಆದರೆ ಅಟಲ್ ಜೀ ಬಳಿ ಹೋದ ಬಳಿಕ ಅವರು ತನ್ನ ಅಭಿಮಾನಿ ಎಂಬುದು ತಿಳಿಯಿತಂತೆ. ಹೇಮಾಮಾಲಿನಿ ಅಭಿನಯದ ‘ಸೀತಾ ಔರ್ ಗೀತಾ’ಚಿತ್ರವನ್ನು 25ಬಾರಿ ನೋಡಿದ್ದೇನೆಂದು ಅಟಲ್ ಜೀ ತಿಳಿಸಿದರಂತೆ. ಹೀಗೆಂದು ಹೇಮಾಮಾಲಿಯವರೇ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮಹಾನ್ ನಾಯಕನನ್ನು ದೇಶ ಕಳೆದುಕೊಂಡಿದೆ ಎಂದಿದ್ದಾರೆ. 1972ರಲ್ಲಿ ತೆರೆಕಂಡ ನಿರ್ದೇಶಕ ರಮೇಸ್ ಸಿಪ್ಪಿ ಯವರ ಬ್ಲಾಕ್ ಬಾಸ್ಟರ್ ಚಿತ್ರದಲ್ಲಿ ಹೇಮಾಮಾಲಿನಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಟ ಶಾರೂಖ್ ಖಾನ್ ಕೂಡ ಕವಿ,ನಮ್ಮದೇಶದ ಪ್ರಧಾನಮಂತ್ರಿ, ಲವ್ ಯು ಬಾಪ್ ಜೀ, ಹಿರಿಯ ಜೀವದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಕೂಡ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದ್ದಾರೆ.   (ಎಸ್.ಎಚ್)

Leave a Reply

comments

Related Articles

error: