ಮೈಸೂರು

ಮಡಿವಾಳರ ಸಂಘದ ಜಿಲ್ಲಾಧ್ಯಕ್ಷೆಯಾಗಿ ವಸಂತಕುಮಾರಿ ಆಯ್ಕೆ

ಜಿಲ್ಲಾ ಮಹಿಳಾ ಘಟಕ ಅಸ್ತಿತ್ವಕ್ಕೆ

ಮೈಸೂರು,ಆ.17 :  ಮಡಿವಾಳರ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಕೆ.ಎಂ.ವಸಂತಕುಮಾರಿ ಅವರು ಆಯ್ಕೆಯಾಗಿದ್ದಾರೆ, ಈಚೆಗೆ ಇಟ್ಟಿಗೆಗೂಡಿನ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಘದ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿಯಾಗಿ ಜಯಲಕ್ಷ್ಮಿ, ಉಪಾಧ್ಯಕ್ಷೆಯಾಗಿ ದಾಕ್ಷಾಯಿಣಿ, ಖಜಾಂಚಿಯಾಗಿ ಮಂಗಳಗೌರಿ, ಸಂಚಾಲಕಿಯಾಗಿ ಅನಿತಾ, ಸಂಘಟನಾ ಕಾರ್ಯದರ್ಶಿಯಾಗಿ ಸವಿತಾ, ಸಹ ಕಾರ್ಯದರ್ಶಿಯಾಗಿ ಸಾವಿತ್ರಿ, ಜಂಟಿ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮೀ, ಸಹ ಸಂಚಾಲಕಿಯಾಗಿ ಅಶ್ವಿನಿ ಅವರುಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷ ಚಂದ್ರಶೇಖರ್ ಭೈರಿ, ಕಾರ್ಯಾಧ‍್ಯಕ್ಷ ಎಂ.ರಾಜು, ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ಉಪಾಧ್ಯಕ್ಷ ಪ್ರಶಾಂತ್, ಖಜಾಂಚಿ ರಮೇಶ‍್, ತಾಲ್ಲೂಕು ಅಧ್ಯಕ್ಷ  ದುದ್ದಗೆರೆ ಶಿವಣ್ಣ, ಸಿದ್ದಪ್ಪಾಜಿ, ಜಯರಾಮು, ಕೆ.ಆರ್.ನಗರಾದ ಧರ್ಮರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು ಎಂದು ಪತ್ರಿಕಾ ಕಾರ್ಯದರ್ಶಿ ಎಂ.ಎನ್.ರಾಜೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: