ಮನರಂಜನೆ

ತಮಿಳು, ತೆಲುಗಿನ `ಯು-ಟರ್ನ್’ ಚಿತ್ರದ ಟ್ರೈಲರ್ ಬಿಡುಗಡೆ

ಹೈದರಬಾದ್,ಆ.17-ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ `ಯು-ಟರ್ನ್’ ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ರೀಮೇಕ್ ಆಗಿದೆ. ತೆಲುಗು ಮತ್ತು ತಮಿಳಿನಲ್ಲಿ ರೆಡಿ ಆಗಿರುವ ‘ಯು-ಟರ್ನ್’ ಚಿತ್ರದ ಟ್ರೈಲರ್ ಇಂದು ಬಿಡುಗಡೆ ಆಗಿದೆ.

ತೆಲುಗು, ತಮಿಳಿನ ಯು-ಟರ್ನ್ ಟ್ರೈಲರ್ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ. ಟ್ರೈಲರ್ ನೋಡಿ ನಟರಾದ ನಾಗಾರ್ಜುನ ಹಾಗೂ ರಾನಾ ದಗ್ಗುಬಾಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡದ ರೀಮೇಕ್ ಆಗಿದ್ದರೂ, ತೆಲುಗು ಹಾಗೂ ತಮಿಳು ನೇಟಿವಿಟಿಗೆ ತಕ್ಕ ಹಾಗೆ ಚಿತ್ರವನ್ನು ಸಿದ್ಧಪಡಿಸಲಾಗಿದೆ. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದ ಪಾತ್ರವನ್ನು ತೆಲುಗು, ತಮಿಳಿನಲ್ಲಿ ನಟಿ ಸಮಂತಾ ಅಕ್ಕಿನೇನಿ ನಿರ್ವಹಿಸಿದ್ದಾರೆ. ರಾಹುಲ್ ರವೀಂದ್ರನ್, ಭೂಮಿಕಾ ಚಾವ್ಲಾ ತಾರಾಬಳಗದಲ್ಲಿ ಇದ್ದಾರೆ.

ಟಾಲಿವುಡ್ ಹಾಗೂ ಕಾಲಿವುಡ್ ಅಂಗಳದಲ್ಲಿ ಬಹು ನಿರೀಕ್ಷೆ ಮೂಡಿಸಿರುವ ‘ಯು-ಟರ್ನ್’ ಸಿನಿಮಾ ಸೆಪ್ಟೆಂಬರ್ 13 ರಂದು ಬಿಡುಗಡೆ ಆಗಲಿದೆ. (ಎಂ.ಎನ್)

Leave a Reply

comments

Related Articles

error: