ಸುದ್ದಿ ಸಂಕ್ಷಿಪ್ತ

ಬಿ.ವಿ.ಕಾರಂತ ರಂಗ ಸಂಗೀತೋತ್ಸವ : ಆಯ್ಕೆ ಪ್ರಕ್ರಿಯೆ

ಆಹ್ವಾನ

ಮೈಸೂರು,ಆ.17 : ಬಿ.ವಿ.ಕಾರಂತ ರಾಜ್ಯಮಟ್ಟದ ರಂಗ ಸಂಗೀತೋತ್ಸವವನ್ನು ಬೆಂಗಳೂರಿನ ಬೆನಕ ತಂಡವೂ ಸೆ.23ರಂದು ಆಯೋಜಿಸುತ್ತಿದ್ದು ಇದರ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಯನ್ನು ಅಭಿಯಂತರರ ಸಂಸ್ಥೆಯು ಆಯೋಜಿಸಿದೆ.

ಆಯ್ಕೆಯಾದ ರಂಗಕರ್ಮಿಗಳು, ರಂಗತಂಡಗಳು ಸೆಪ್ಟೆಂಬರ್ ನಲ್ಲಿ ಬೆಂಗಳೂರಿನ ಡಾ.ರಾಜ್ ಕುಮಾರ್ ಭವನದಲ್ಲಿ ನಡೆಯುವ ಅಂತಿಮ ಸುತ್ತಿನಲ್ಲಿ ಭಾಗವಹಿಸಬೇಕಾಗಿದೆ, ಅಲ್ಲಿ ಆಯ್ಕೆಯಾದವರು ಪ್ರಥಮ ಶ್ರೇಣಿಯ 5 ತಂಡಗಳಿಗೆ ಹಾಗೂ ದ್ವಿತೀಯ ಶ್ರೇಣಿಯ 5 ತಂಡಗಳಿಗೆ ಬೆನಕ ತಂಡದಿಂದ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿಚ್ಚಿಸುವವರು ಆ.26ರೊಳಗೆ ದೂ. ಸಂ.. 900462955, 9945355777 ಅನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದೆಂದು ಕಾರ್ಯದರ್ಶಿ ಬಿ.ಎಸ್.ತಾಂಡವಮೂರ್ತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: