ದೇಶ

ಡಿ.19ರ ಸುತ್ತೋಲೆ ವಾಪಸ್ ಪಡೆದ ಆರ್‍ಬಿಐ

ಡಿಸೆಂಬರ್ 19ರಂದು ಹಳೆ ನೋಟು ಜಮಾವಣೆ ಸಂಬಂಧ ಹೊರಡಿಸಿದ್ದ ಸುತ್ತೋಲೆಯನ್ನು ವಾಪಸ್ ಪಡೆದಿರುವ ಆರ್‍ಬಿಐ, 5 ಸಾವಿರಕ್ಕಿಂತ ಹೆಚ್ಚು ಮೊತ್ತದ ಹಣವನ್ನು ಎಷ್ಟು ಬಾರಿಯಾದರೂ ಖಾತೆಗೆ ಜಮಾ ಮಾಡಬಹುದೆಂದು ಬುಧವಾರ ಮರು ಆದೇಶ ನೀಡಿದೆ.

ಹಳೆಯ 500 ಮತ್ತು 1000 ರೂ. ಹಣ ಜಮಾವಣೆಗೆ ಮಿತಿ ಹೇರಿದ್ದ ಆರ್‍ಬಿಐ 5 ಸಾವಿರಕ್ಕಿಂತ ಅಧಿಕ ಮೊತ್ತವನ್ನು ಡಿ.30ರವರೆಗೆ ಒಂದು ಬಾರಿ ಮಾತ್ರ ಜಮಾ ಮಾಡಬಹುದೆಂದು ಆದೇಶಿಸಿತ್ತು. ಈ ನಿಯಮಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಆದೇಶವನ್ನು ವಾಪಸ್ ತೆಗೆದುಕೊಂಡಿದೆ. ಹಾಗಾಗಿ, ಡಿ.30ರವರೆಗೆ 5 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಠೇವಣಿ ಮಾಡಬಹುದು.

Leave a Reply

comments

Related Articles

error: