ಪ್ರಮುಖ ಸುದ್ದಿ

ನನ್ನೂರಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಅವರನ್ನು ರಕ್ಷಿಸಿ ಕಣ್ಣೀರಿಟ್ಟ ವೀಣಾ ಅಚ್ಚಯ್ಯ

ರಾಜ್ಯ(ಮಡಿಕೇರಿ)ಆ.17:-  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವರುಗಳು ಅಧಿಕಾರಿಗಳ ಸಭೆ ನಡೆಸುತ್ತಿದ್ದ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಆಗಮಿಸಿ ಕಣ್ಣೀರು ಹಾಕಿದರು. ನೂರಾರು ಮಂದಿ ರಕ್ಷಣೆಗಾಗಿ ಗುಡ್ಡ ಹತ್ತಿ ಕುಳಿತಿದ್ದಾರೆ. ಮೊದಲು ಅವರನ್ನು  ರಕ್ಷಿಸಿ, ನಂತರ ಸಭೆ ನಡೆಸಿ ಎಂದು  ಸಚಿವರುಗಳೆದುರು ಗೋಗರೆದರು. ನಿನ್ನೆಯಿಂದ ಹೆಲಿಕಾಪ್ಟರ್ ಬರುತ್ತದೆ ಎನ್ನುತ್ತೀದ್ದೀರಿ, ನಿಮ್ಮ ಹೆಲಿಕಾಪ್ಟರ್ ಎಲ್ಲಿಗೆ ತಲುಪಿದೆ ಎಂದು ಪ್ರಶ್ನಿಸಿದರು.

ನನ್ನ ಊರು ಮಕ್ಕಂದೂರು, ಮುಕ್ಕೋಡ್ಲು ಗ್ರಾಮದ 900 ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಮೊದಲು ಅವರನ್ನು ರಕ್ಷಿಸಿ ಎಂದು ದು:ಖಿಸಿದರು.

ಈ ಸಂದರ್ಭ ಮಾತನಾಡಿದ ಸಚಿವ ದೇಶಪಾಂಡೆ ಸರಕಾರ ಕೊಡಗಿನ ಜನರೊಂದಿಗೆ ಇದೆ ಎಂದು ಧೈರ್ಯವಾಗಿರಿ ಎಂದು ಅಭಯ ನೀಡಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: