ದೇಶಪ್ರಮುಖ ಸುದ್ದಿ

ರಾಷ್ಟ್ರಪತಿ ಹುದ್ದೆಗೆ ಸುಷ್ಮಾ ಹೆಸರು..?

ನವದೆಹಲಿ: ರಾಷ್ಟ್ರಪತಿ ಆಯ್ಕೆಯ ಚುನಾವಣೆ ಜುಲೈನಲ್ಲಿ ನಡೆಯಲಿದ್ದು, ಬಿಜೆಪಿಯಲ್ಲಿ ಈಗಿನಿಂದಲೇ ಯಾರನ್ನು ರಾಷ್ಟ್ರಪತಿ ಹುದ್ದೆಗೆ ನಿಲ್ಲಿಸಬಹುದೆನ್ನುವ ಲೆಕ್ಕಾಚಾರ ಆರಂಭವಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಹೆಸರು ಸೂಚಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.  ಆರ್.ಎಸ್.ಎಸ್ ಪ್ರಮುಖರಾದ ಜೋಶಿ ಹಾಗೂ ದತ್ತಾತ್ರೇಯ ಹೊಸಬಾಳೆ ಅವರು ಸುಷ್ಮಾ ಹೆಸರನ್ನೇ ಸೂಚಿಸಿದ್ದಾರೆ. ಇದಕ್ಕೆ ಆರ್.ಎಸ್.ಎಸ್ ಪ್ರಮುಖ ಮೋಹನ್ ಭಾಗವತ್ ಸಹ ಮೌನವಾಗಿ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ವಿರೋಧ ಪಕ್ಷದವರಲ್ಲೂ ಸುಷ್ಮಾ ಕುರಿತು ಯಾವುದೇ ಅಪಸ್ವರಗಳಿಲ್ಲ. ಎಲ್ಲರೂ ಸುಷ್ಮಾ ಕುರಿತು ಸಕಾರಾತ್ಮವಾಗಿದ್ದಾರೆ. ಮೆರಿಟ್ ಆಧಾರದಲ್ಲಿ ನೋಡಿದರೂ ಯಾವುದೇ ಲೋಪ ತೆಗೆಯುವ ಸಾಧ್ಯತೆ ಇಲ್ಲ ಎನ್ನುವ ನಿಲುವು ಬಿಜೆಪಿಯವರದ್ದು. ಆದರೆ ಅವರ ಆರೋಗ್ಯ ಕೈಕೊಡುತ್ತಿದೆ. ಇದರಿಂದ ರಾಷ್ಟ್ರಪತಿ ಹುದ್ದೆಯನ್ನಲಂಕರಿಸುವುದು ಸ್ವಲ್ಪ ತೊಂದರೆಯಾಗಬಹುದೆನ್ನುವ ಮಾತುಗಳೂ ಕೇಳಿ ಬರುತ್ತಿವೆ.

Leave a Reply

comments

Related Articles

error: