ಮೈಸೂರು

ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ತುರ್ತು ಅವಶ್ಯಕ ಸಾಮಗ್ರಿ ರವಾನಿಸಿದ ಜಿಲ್ಲಾಡಳಿತ

ಮೈಸೂರು,ಆ.18:- ಮೈಸೂರು ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರಪಾಲಿಕೆ ವತಿಯಿಂದ ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ತುರ್ತು ಅವಶ್ಯಕ ಸಾಮಗ್ರಿಗಳನ್ನು ನೀಡುವಂತೆ ದಾನಿಗಳು ಮತ್ತು ಸಂಘಸಂಸ್ಥೆಗಳಿಂದ ಸಹಾಯಕ್ಕಾಗಿ ಯಾಚಿಸಲಾಗಿದ್ದು, ನಗರದ ಪುರಭವನದಲ್ಲಿ ಅದಕ್ಕಾಗಿಯೇ ಕೇಂದ್ರ ತೆರೆಯಲಾಗಿತ್ತು. ದಾನಿಗಳು ಸಹಕರಿಸಿದ್ದು, ಸಮರೋಪಾದಿಯಲ್ಲಿ ವಿತರಣಾ ಕಾರ್ಯ ನಡೆದಿದೆ.

ಮೈಸೂರು ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ವತಿಯಿಂದ ಅವಶ್ಯಕ ವಸ್ತುಗಳನ್ನು ರವಾನಿಸಲಾಗುತ್ತಿದೆ. ಬ್ರೆಡ್, ಬಿಸ್ಕತ್, ಹಾಲಿನ ಪೌಡರ್,ಕುಡಿಯುವ ನೀರಿನ ಬಾಟಲ್,ಔಷಧಿಗಳು,ಸೋಪು ಸೇರಿದಂತೆ ಇನ್ನಿತರ ವಸ್ತುಗಳನ್ನು ರವಾನಿಸಲಾಗುತ್ತಿದೆ. ಸಹಾಯಕ್ಕಾಗಿ ಸಮರೋಪಾದಿಯಲ್ಲಿ  ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ. ದಾನಿಗಳು ಹೆಚ್ಚಿನ ಮಾಹಿತಿಗಾಗಿ ದೂ.ಸಂ ನಿಯಂತ್ರಣಾ ಕೊಠಡಿ 0821-2440890, 9449841196 ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: