ಮೈಸೂರು

ಎಚ್.ಡಿ.ಕೋಟೆಯಲ್ಲಿ 50ಕ್ಕೂ ಅಧಿಕ ಮನೆಗಳು ಜಲಾವೃತ

ಮೈಸೂರು,ಆ.18:- ಕೇರಳದ ವೈನಾಡು ಜಿಲ್ಲೆಯಲ್ಲಿ ಭೀಕರ ಮಳೆಯಿಂದ ಕಬಿನಿ ಜಲಾಶಯ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿಪಾತ್ರದ 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಮಳೆ ನಿರಾಶ್ರಿತರನ್ನು ಗಂಜಿಕೇಂದ್ರಕ್ಕೆ ಸಾಗಿಸಲು ವಿಪತ್ತು ನಿರ್ವಹಣಾ ತಂಡ ಹರಸಾಹಸ ಪಡುವಂತಾಗಿದೆ.

ಕೇರಳ ರಾಜ್ಯದ ಗಡಿಭಾಗದಲ್ಲಿರುವ ಎಚ್.ಡಿ.ಕೋಟೆ ತಾಲೂಕಿನ ಆನೆಮಾಳ, ಡಿ.ಬಿ.ಕುಪ್ಪೆ, ಮಚ್ಚೂರು, ಉದ್ಬೂರು, ಸಿಂಹಳಿ, ವಡಕನಮಾಳ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಜಲಾವೃತವಾಗಿದ್ದು,ಡಿ.ಬಿ.ಕುಪ್ಪೆಯ ಸರ್ಕಾರಿ ಶಾಲೆಯಲ್ಲಿ 35 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಇಲ್ಲಿಗೆ ನಿವಾಸಿಗಳನ್ನು ಬೋಟ್ ಗಳ ಮೂಲಕ ಕರೆದುಕೊಂಡು ಬರಲು ಮಳೆಯನ್ನು ಲೆಕ್ಕಿಸದೇ ವಿಪತ್ತು ನಿರ್ವಹಣಾ ಅಧಿಕಾರಿಗಳ ತಂಡ ಕೆಲಸ ಮಾಡುತ್ತಿದೆ.

ತಿ.ನರಸೀಪುರ ತಾಲೂಕಿನ ತಲಕಾಡು ಹೋಬಳಿಯ ತಡಿಮಾಲಂಗಿ ಗ್ರಾಮದ ದೇವಾಲಯ ಮತ್ತು ಎಂಟು ಮನೆಗಳು ನೀರಿನಲ್ಲಿ ಮುಳುಗಿ ಹೋಗಿದೆ. ಈ ಗ್ರಾಮದ ಜನತೆಯನ್ನು ಸುರಕ್ಷಿತವಾಗಿ ಸಾಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: