ಮೈಸೂರು

ಉಚಿತ ಮಧುಮೇಹ ಮತ್ತು ಬೊಜ್ಜು ನಿವಾರಣಾ ಶಿಬಿರ ಡಿ.23ರಂದು

ಡಾ.ಟುಲಿಪ್ಸ್ ಡಯಾಬಿಟಿಸ್ ಅಂಡ್ ಒಬೆಸಿಟಿ ಸರ್ಜರಿ ಸೆಂಟರ್‍ ನಿಂದ ಉಚಿತ ಮಧುಮೇಹ ಮತ್ತು ಬೊಜ್ಜು ನಿವಾರಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇಶದ ಮೊದಲ ಬಾರಿಯಾಟ್ರಿಕ್ ಮಹಿಳಾ ಸರ್ಜನ್ ಡಾ.ಟುಲಿಪ್ಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.23ರಂದು ಬೆಳಗ್ಗೆ 9 ರಿಂದ ಸಂಜೆಯವರೆಗೂ ಮಂಡ್ಯದ ಹರ್ಡೀಕರ್ ಭವನದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಬಿಎಂಐ, ಜಿಅರ್‍ಬಿಎಸ್, ಮೂತ್ರ, ರೊಟೀಸ್, ಅಧಿಕ ರಕ್ತದೊತ್ತಡ, ಬಾರಿಯಾಟ್ರಿಕ್ ಹಾಗೂ ಮಧುಮೇಹ ಶಸ್ತ್ರ ಚಿಕಿತ್ಸೆಗಳ ಕುರಿತಾದ ವೈದ್ಯರ ಸಲಹೆ ಹಾಗೂ ನ್ಯೂಟ್ರಿಷನಲ್ ಕೌನ್ಸೆಲ್ಲಿಂಗ್ ನಡೆಯಲಿದೆ. ಡಾ.ಟುಲಿಪ್ಸ್ ಕೇಂದ್ರ ಬೊಜ್ಜು ನಿವಾರಣೆಗೆಂದೇ ಮೀಸಲಾದ ಕರ್ನಾಟಕದ ಏಕೈಕ ಆಸ್ಪತ್ರೆಯಾಗಿದೆ ಎಂದು ತಿಳಿಸಿದರು.

ಭಾರತವೂ ಮಧುಮೇಹದ ರಾಜಧಾನಿಯಾಗಿದೆ ಹಾಗೂ ಜನಸಂಖ್ಯೆಯಲ್ಲಿ 12 ಕೋಟಿಗೂ ಅಧಿಕ ಮಂದಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೊಜ್ಜು ಆರೋಗ್ಯಕ್ಕೆ ಮಾರಕವಾಗಿದ್ದು ಹಲವಾರು ಕಾಯಿಲೆಗಳ ಮೂಲಪ್ರೇರಣೆಯಾಗಿದೆ. ವಿಜ್ಞಾನ-ತಂತ್ರಜ್ಞಾನ ಮುಂದುವರಿದಂತೆ ವೈದ್ಯಕೀಯ ರಂಗದಲ್ಲಾದ ನೂತನ ಅವಿಷ್ಕಾರಗಳಿಂದ ಬಾರಿಯಾಟ್ರಿಕ್ ಪರಿಣಾಮಕಾರಿ ಶಸ್ತ್ರ ಚಿಕಿತ್ಸೆಯಾಗಿದ್ದು ಇದರಿಂದ ಮಧುಮೇಹ, ಬಿಪಿ, ಹೃದಯ ಸೇರಿದಂತೆ ಹಲವಾರು ಕಾಯಿಲೆಗಳನ್ನು ಬೇರು ಸಮೇತ ತೆಗೆಯಬಹುದು. ಇದೊಂದು ಸರಳ ಶಸ್ತ್ರಚಿಕಿತ್ಸೆಯಾಗಿದ್ದು ರೋಗಿಯು ಎರಡು ದಿನಗಳಲ್ಲಿಯೇ ಮನೆಗೆ ಮರಳಬಹುದು ಎಂದು ತಿಳಿಸಿದರು.

ಶಿಬಿರದಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 8880537537 ಅನ್ನು ಸಂಪರ್ಕಿಸಬಹುದು.

ಸುದ್ದಿಗೋಷ್ಠಿಯಲ್ಲಿ ಹೃದಯ ಶಸ್ತ್ರಚಿಕಿತ್ಸಕ ತಜ್ಞ ಡಾ.ರಮೇಶ್, ಹಾಗೂ ಡಾ.ಅಶೋಕ್‍ ಕುಮಾರ್ ಉಪಸ್ಥಿತರಿದ್ದರು.

Leave a Reply

comments

Related Articles

error: