ಸುದ್ದಿ ಸಂಕ್ಷಿಪ್ತ
ದಿ.21ರಂದು ರೆಡ್ ಕ್ರಾಸ್ ಘಟಕ ಉದ್ಘಾಟನೆ
ಮೈಸೂರು,ಆ.18 : ವಿದ್ಯಾವರ್ಧಕ ಸಂಘದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಸಂಸ್ಥೆಯ ಯುವ ಘಟಕ ಉದ್ಘಾಟನೆಯನ್ನು ಆ.21ರ ಬೆಳಗ್ಗೆ 11 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಮೈಸೂರು ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆಯ ಮಾನಸಿಕ ವಿಭಾಗ ಮುಖ್ಯಸ್ಥ ಡಾ.ಬಿ.ಎನ್.ರಾವೀಶ್ ಉದ್ಘಾಟಿಸುವರು. ಸಂಘದ ಕಾರ್ಯದರ್ಶಿ.ವಿಶ್ವನಾಥ್ ಅಧ್ಯಕ್ಷತೆ. ಖಜಾಂಚಿ ಎಸ್.ಎನ್.ಲಕ್ಷ್ಮೀನಾರಾಯಣ, ಸಿಎಂಸಿ ಅಧ್ಯಕ್ಷ ಟಿ.ನಾಗರಾಜು, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಮರಿಗೌಡ ಇರುವರು.