ಮೈಸೂರು

ಆ.27ರಿಂದ ಶ್ರೀಗುರು ರಾಘವೇಂದ್ರ ಸ್ವಾಮಿಗಳ 347ನೇ ವರ್ಷದ ಆರಾಧನೆ

ಮೈಸೂರು,ಆ.18 : ಶ್ರೀಗುರುರಾಘವೇಂದ್ರ ಸ್ವಾಮಿಗಳ 347ನೇ ವರ್ಷದ ಆರಾಧನಾ ಮಹೋತ್ಸವನ್ನು ಆ.27ರಿಂದ 29ರವರೆಗೆ ನಂ.29 ಸಾರ್ವಭೌಮ, 3ನೇ ಬ್ಲಾಕ್, ಸೊಮನಾಥನಗರ, ದಟ್ಟಗಳ್ಳಿ 3ನೇ ಹಂತದ ಇಲ್ಲಿ ಆಯೋಜಿಸಲಾಗಿದೆ.

ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಆರಂಭವಾಗುವ ಪೂಜಾ ಕೈಂಕರ್ಯಗಳು ರಾತ್ರಿ 10 ಗಂಟೆಯ ಮಹಾಮಂಗಳಾರತಿ ಹಾಗೂ ತೊಟ್ಟಿಲು ಸೇವೆಯೊಂದಿಗೆ ಮುಕ್ತಾಯವಾಗಲಿವೆ.

ಆ.27ರಂದು  ಬೆಳಗ್ಗೆ 8  ಗಂಟೆಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಿಂದ ವಾಹನೋತ್ಸವ. ಆ.28ರಂದು ಬೆಳಗ್ಗೆ 9 ಗಂಟೆಗೆ ಶ್ರೀರಾಮಮಂತ್ರ ಸಂಪುಟೀಕರಣ ಹನುಮಾನ್ ಯಜ್ಞ, ಆ.29ರಂದು ಬೆಳಗ್ಗೆ 9 ಗಂಟೆತೆ ತ್ರೀಶಕ್ತಿ ಹವನ ಹಾಗೂ ಸತ್ಯನಾರಾಯಣ ಪೂಜೆ ನೆರವೇರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅದರಂತೆ ಪ್ರತಿ ದಿನ ಸಂಜೆ 6.30ರಿಂದ ವಿವಿಧ ವಿದ್ವಾಂಸರಿಂದ ಸಂಗೀತ ಕಾರ್ಯಕ್ರಮ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: