ಮೈಸೂರು

ನಾಳೆ ನಾಡಕುಸ್ತಿ ಪಂದ್ಯಾವಳಿ : 35 ಜೊತೆ ಪೈಲ್ವಾನರ ಸೆಣಸಾಟ

ಸ್ವಾತಂತ್ರ್ಯೋತ್ಸವ ಅಂಗವಾಗಿ

ಮೈಸೂರು,ಆ.18 : ಶಮಂತಕಮಣಿ ಕುಸ್ತಿಪಟುಗಳ ಸೇವಾ ಸಮಿತಿ ವತಿಯಿಂದ 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 35 ಜೊತೆ ನಾಡಕುಸ್ತಿ ಪಂದ್ಯಾವಳಿಯನ್ನು ನಾಳೆ (19) ಮಧ‍್ಯಾಹ್ನ 3 ಗಂಟೆಗೆ ಡಿ.ದೇವರಾಜ ಅರಸು ವಿವಿದೋದ್ದೇಶ ಕ್ರೀಡಾಂಗನದಲ್ಲಿ ಆಯೋಜಿಸಲಾಗಿದೆ.

ಬನ್ನೂರ ಪೈ ಮನೋಜ್ ಗೌಡ ವರ್ಸಸ್ ಕುಂಬಾರಕೊಪ್ಪಲು ನಂದನ್, ನಜರ್ ಬಾದ್ ನ ಮೋಹಿತ್ ವಿರುದ್ಧ ಈಶ್ವರರಾಯರ ಗರಡಿ ಪೈ. ಮಾದಪ್ಪ, ಇಟ್ಟಿಗೆಗೂಡಿನ ಹರೀಶ್ ವಿರುದ್ಧ ಹುಣಸೂರು ಕಾರ್ತಿಕ್, ಕಾಳಿಸಿದ್ದನಹುಂಡಿಯ ಪ್ರಸನ್ನ ವಿರುದ್ಧ ಶ್ರೀರಂಗಪಟ್ಟಣದ ಜ್ಯೂ ಅಭಿ, ಪಾಲಳ್ಲಿ ಪೈ ಜೀವನ್ ವಿರುದ್ಧ ಫಖೀರ್ ಸಾಬ್ ಗರಡಿಯ ಪೈ ಮೈಕಲ್ ರಾಜು ನಜರ್ ಬಾದ್ ನ ಶರತ್ ವಿರುದ್ಧ ಭೂತಪ್ಪ ಗರಡಿ ಪೈ.ಪವನ್ ಸೆಣಸುವರು ಇದರಂತೆ ಇನ್ನೂ ಹಲವು ಪೈಲ್ವಾನ್ ತಮ್ಮ ಶಕ್ತಿ ಸಾಮರ್ಥ್ಯ ಮೆರೆಯುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

comments

Related Articles

error: