ಕ್ರೀಡೆಮೈಸೂರು

ಮೈಸೂರು ವಾರಿಯರ್ಸ್‍ ತಂಡದ ಗೀತೆ, ಜರ್ಸಿ ಬಿಡುಗಡೆ

ಮೈಸೂರು,ಆ.20-ಏಳನೇ ಆವೃತ್ತಿಯ ಕೆಪಿಎಲ್ ಗೆ ಮೈಸೂರು ವಾರಿಯರ್ಸ್ ತಂಡದ ಗೀತೆಯನ್ನು ಹಾಗೂ ಜರ್ಸಿಯನ್ನು ಇಂದು ಬಿಡುಗಡೆ ಮಾಡಲಾಯಿತು.

`ನೀ ಸಲಾಮ್ ಹೊಡಿ’  ತಂಡದ ಗೀತೆಯನ್ನು ಖ್ಯಾತ ಗಾಯಕರಾದ ರಘು ದೀಕ್ಷಿತ್‍ ಅವರೇ ಸಂಯೋಜನೆ ಮಾಡಿ ಹಾಡಿದ್ದಾರೆ. ರಘು ದೀಕ್ಷಿತ್ ತಂಡದ ಗೀತೆಯನ್ನು ಕರ್ನಾಟಕದ ಜಾನಪದ ಸಂಗೀತದಿಂದ ಸ್ಫೂರ್ತಿ ಪಡೆದು ಸಮಕಾಲೀನ ಸಂಗೀತದ ಲೇಪನದೊಂದಿಗೆ ಸಂಯೋಜನೆ ಮಾಡಿ ಹಾಡಿದ್ದಾರೆ. ಹೀಗಾಗಿ ಈ ಗೀತೆಯು ಕ್ರಿಕೆಟ್ ಪ್ರೇಮಿಗಳನ್ನು ಮತ್ತು ಸಂಗೀತ ಪ್ರೇಮಿಗಳನ್ನು ಏಕಕಾಲಕ್ಕೆ ಸೆಳೆದುಕೊಳ್ಳಲಿದೆ. ಅಲ್ಲದೆ, ಈ ಗೀತೆ ತಂಡದಲ್ಲಿ ಹೊಸ ಚೈತನ್ಯವನ್ನು ತುಂಬಲಿದೆ.

ಮೈಸೂರು ವಾರಿಯರ್ಸ್‍ನ ಸಿಗ್ನಿಚರ್ ಕಲರ್‍ ಆಗಿರುವ ಹಳದಿ ಮತ್ತು ನೀಲಿ ಬಣ್ಣದ ಛಾಯೆಯಲ್ಲಿರುವ ಜೆರ್ಸಿ ಮೇಲೆ ವಾರಿಯರ್ಸ್ ಸಹಿ ಕೂಡ ಇರಲಿದೆ. ಈ ಜೆರ್ಸಿಯನ್ನು ಟೈಕಾ (TYKA) ಸ್ಪೋರ್ಟ್ಸ್ ವಿನ್ಯಾಸಗೊಳಿಸಿದೆ. ಜರ್ಸಿಯ ವಿಶಿಷ್ಟ ಅಂಶವೆಂದರೆ ಇದನ್ನು ವಿಶೇಷವಾಗಿ ಬೆವರು ಮುಕ್ತ ಫ್ಯಾಬ್ರಿಕ್‍ನಿಂದ ತಯಾರಿಸಲಾಗಿದ್ದು, ಮುಖ್ಯವಾಗಿ ಇದು ಈ ಭಾಗದ ವಾತಾವರಣಕ್ಕೆ ಹೆಚ್ಚು ಸೂಕ್ತವಾಗಿದೆ.

ಸೈಕಲ್ ಪ್ಯೂರ್‍ಅಗರಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕರೂ ಹಾಗೂ ಮೈಸೂರು ವಾರಿಯರ್ಸ್‍ನ ಮಾಲೀಕರೂ ಆದ ಅರ್ಜುನ್‍ರಂಗ ಮಾತನಾಡಿ, ರಘು ದೀಕ್ಷಿತ್‍ ಅವರ ತಂಡದ ಗೀತೆ ಮತ್ತು ಟೈಕಾ ಸ್ಪೋರ್ಟ್ಸ್ ನಿಂದ ಸಿದ್ಧಗೊಂಡ ಜರ್ಸಿ ಅದ್ಭುತವಾಗಿದೆ. ಈ ಪ್ರದೇಶದ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಪೂರಕವಾಗಿ ತಂಡದ ಗೀತೆ ಮತ್ತು ಜೆರ್ಸಿಯನ್ನು ತಯಾರಿಸಲಾಗಿದೆ. ತಂಡದ ಗೀತೆಯು ಪ್ರೇಕ್ಷಕರನ್ನು ಆಕರ್ಷಿಸುವ ಜೊತೆಗೆ ನಮ್ಮ ತಂಡದ ನೂತನ ಸದಸ್ಯರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಈ ಹೊಸ ತಂಡ ಮುಂದಿನ ಪಂದ್ಯಾವಳಿಯಲ್ಲಿ ನೀಡಲಿರುವ ಅದ್ಭುತ ಪ್ರದರ್ಶನವನ್ನು ನೋಡಲು ಕಾತರರಾಗಿದ್ದೇವೆ ಎಂದರು.

ಜೆ. ಸುಚಿತ್ ಮತ್ತು ವೆಂಕಟೇಶ್ ಪ್ರಸಾದ್ ನೇತೃತ್ವದ 2018ರ ತಂಡವು ಅದ್ಭುತ ಪ್ರದರ್ಶನವನ್ನು ನೀಡಲು ಸಜ್ಜಾಗಿದೆ. ಬಿಡುಗಡೆಯಾದ ತಂಡದ ಗೀತೆಯನ್ನು ನೋಡಲು https://www.youtube.com/watch?v=M61qACfsFn8&feature=youtu.be ಭೇಟಿ ನೀಡಬಹುದು. (ಎಂ.ಎನ್)

 

Leave a Reply

comments

Related Articles

error: