ಮೈಸೂರು

ಅಂಬೇಡ್ಕರ್ ವಿವಿಧೋದ್ದೇಶ ಸೇವಾ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಫೆ.11ರಂದು

67ನೇ ಗಣರಾಜ್ಯೋತ್ಸವದಂಗವಾಗಿ ಟಿ.ನರಸೀಪುರದ ಅಂಬೇಡ್ಕರ್ ವಿವಿಧೋದ್ದೇಶ ಸೇವಾ ಸಂಸ್ಥೆಯಿಂದ ‘ಭಾರತ ಸಂವಿಧಾನ’ ದ ವಿಷಯವಾಗಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ತುಂಬಲ ರಾಮಣ್ಣ ತಿಳಿಸಿದರು.

ಅವರು ಬುಧವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಪರ್ಧೆಯನ್ನು ಫೆ.5ರಂದು ಬೆಳಗ್ಗೆ 10.30 ರಿಂದ 1 ಗಂಟೆವರೆಗೂ ಜೂನಿಯರ್ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಪ್ರವೇಶ ಪತ್ರವನ್ನು ಒಂದು ವಾರ ಮುಂಚಿತವಾಗಿ ವಿತರಿಸಲಾಗುವುದು. ಫೆ.11ರ ಶನಿವಾರ ಬೆಳಗ್ಗೆ 9 ಗಂಟೆಗೆ ಕಲಾಮಂದಿರದಲ್ಲಿ ಫಲಿತಾಂಶ ಪ್ರಕಟ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

50 ಸಾವಿರ ರೂಪಾಯಿ, 25 ಸಾವಿರ ರೂಪಾಯಿ ಹಾಗೂ 10 ಸಾವಿರ ರೂಪಾಯಿಗಳ ಬಹುಮಾನವು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಗೆ ನೀಡಲಾಗುವುದು. ಪರೀಕ್ಷೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನ ಹಾಗೂ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುವುದು ಎಂದರು.

ಸಾವಿರ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶವಿದೆ. ಪ್ರವೇಶ ಶುಲ್ಕ ನೂರು ರೂಪಾಯಿ. ಅಭ್ಯರ್ಥಿಗೆ ಕನಿಷ್ಠ 21 ಹಾಗೂ ಗರಿಷ್ಠ 45 ವರ್ಷ ವಯೋಮಿತಿ. ಶುಲ್ಕವನ್ನು ಸಂಸ್ಥೆಯ ಬ್ಯಾಂಕ್ ಖಾತೆ ಸಂಖ್ಯೆ 64088210487, IFSC ಕೋಡ್ ಎಸ್‍ಬಿಎಮ್ 0040076 ನರಸೀಪುರ ಶಾಖೆ ಇಲ್ಲಿ ಜಮೆ ಮಾಡಬೇಕು. ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಯ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಜಾತಿ ಪ್ರಮಾಣ ಹಾಗೂ ವಯೋ ದೃಢೀಕರಣ ಪತ್ರ ಕಡ್ಡಾಯವಾಗಿ ಲಗತ್ತಿಸಬೇಕು. ಜ.5 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ತಿಳಿಸಿದರು.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಅಧ್ಯಕ್ಷರು/ಕಾರ್ಯದರ್ಶಿ ಎವಿಎಸ್‍ಎಸ್, ಮಲ್ಲಿಕಾರ್ಜುನ ಕಾಂಪ್ಲೆಕ್ಸ್, ಎ.ಪಿ.ಎಂ.ಸಿ. ಎದುರು ಟಿ.ನರಸೀಪುರ, ಮತ್ತು ಅಧ್ಯಕ್ಷರು/ಕಾರ್ಯದರ್ಶಿ ಎವಿಎಸ್‍ಎಸ್, ನಂ.147/13, ಸಿದ್ದೇಶ್ವರ ಕಾಂಪ್ಲೆಕ್ಸ್, 1ನೇ ಮಹಡಿ, ಆಲನಹಳ್ಳಿ ಮುಖ್ಯರಸ್ತೆ, ಸಂಗೀತ ಕಾರ್ನರ್ ಹತ್ತಿರ, ಸಿದ್ಧಾರ್ಥನಗರ, ಮೈಸೂರು ಇಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9980483303, 8861305040 ಹಾಗೂ 9901542591 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: