ಕರ್ನಾಟಕಪ್ರಮುಖ ಸುದ್ದಿ

ಕೊಡಗು ನೆರೆ ಸಂತ್ರಸ್ತರಿಗೆ ಮಂಡ್ಯ ಜಿಲ್ಲಾಡಳಿತದ ನೆರವು

ಮಂಡ್ಯ (ಆ.20): ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ನೆರವು ನೀಡಲು ಮಂಡ್ಯ ಜಿಲ್ಲಾಡಳಿತ ಮುಂದಾಗಿದ್ದು, ಮಂಡ್ಯ ನಗರದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ನೆರವು ಸ್ವೀಕರಿಸಲು ಸಂಗ್ರಹ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಕೊಡಗು ಜಿಲ್ಲೆ ಅತಿವೃಷ್ಟಿಗೆ ಒಳಗಾಗಿರುವುದರಿಂದ ಸ್ವ-ಇಚ್ಚೆಯಿಂದ, ಸಂಘ ಸಂಸ್ಥೆಗಳಿಂದ, ಸಾರ್ವಜನಿಕರಿಂದ ನೆರೆ ಸಂತ್ರಸ್ಥರಿಗೆ ನೀಡುವ ದೇಣಿಗೆ, ಆಹಾರ ಸಾಮಾಗ್ರಿ, ಉಪಯೋಗಿಸದ ವಸ್ತ್ರ ಇತ್ಯಾದಿಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಚೇರಿಯ ನಗರಾಭಿವೃದ್ಧಿ ಕೋಶ ಮಂಡ್ಯದಲ್ಲಿ ಕೌಂಟರ್ ತೆರೆಯಲಾಗಿದೆ.

ಮಂಡ್ಯ ನಗರಾಭಿವೃದ್ಧಿ ಕೋಶ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕುಬೇರಪ್ಪ ಅವರಿಗೆ ನೆರವಿಗೆ ಬರುವ ವಸ್ತುಗಳ ಸಂಗ್ರಹದ ಜವಾಬ್ದಾರಿಯನ್ನು ನೀಡಲಾಗಿದ್ದು, ನೆರವು ನೀಡಲು ಇಚ್ಚಿಸುವ ದಾನಿಗಳು ದೂರವಾಣಿ ಸಂಖ್ಯೆ 08232-231111 ಅಥವಾ ಮೊಬೈಲ್ ಸಂಖ್ಯೆ 8073995839 ಕರೆ ಮಾಡಿ ನೆರವನ್ನು ನೀಡಬಹುದು. ಧನ ಸಹಾಯ ಮಾಡಲು ಮುಂದಾಗುವ ಸಾರ್ವಜನಿಕರಿಗೆ “ಕೊಡಗು ಫ್ಲ್ಲಡ್ ರಿಲೀಫ್ ಫಂಡ್- ಮಂಡ್ಯ” (KODAGU FLOOD RELIEF FUND-MANDYA)  ಹೆಸರಿಗೆ ವಿಜಯ ಬ್ಯಾಂಕ್‍ನಲ್ಲಿ ಪ್ರತ್ಯೇಕ ಖಾತೆಯನ್ನು ತೆರೆಯಲಾಗಿದ್ದು, ಖಾತೆ ಸಂಖ್ಯೆ 114101101000054 ಗೆ (IFSC CODE: VIJB0001141) ಹಣವನ್ನು ಜಮೆ ಮಾಡಬಹುದು.

ಈಗಾಗಲೇ ಮಂಡ್ಯ ಜಿಲ್ಲೆಯ ಜನತೆ ಹಾಗೂ ಸಂಘ ಸಂಸ್ಥೆಗಳು ಸಾಕಷ್ಟು ಸಂಖ್ಯೆಯಲ್ಲಿ ಸಹಾಯ ಹಸ್ತ ನೀಡಿಲು ಮುಂದಾಗಿರುವುದನ್ನು ಮಂಡ್ಯ ಜಿಲ್ಲಾಡಳಿತ ಶ್ಲ್ಲಾಘಿಸಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ನೆರವಿಗೆ ಜನರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ಕೋರಿದ್ದಾರೆ.(ಎನ್.ಬಿ)

Leave a Reply

comments

Related Articles

error: