ಕರ್ನಾಟಕಪ್ರಮುಖ ಸುದ್ದಿ

ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಜನರೂ ಸರ್ಕಾರದ ರೀತಿ ಸಹಾಯ ಮಾಡಬೇಕು: ಹಿರಿಯ ನಟ ರವಿಚಂದ್ರನ್

ಬೆಂಗಳೂರು (ಆ.20) : ಕೊಡಗಿನ ನೆರೆ ಸಂತ್ರಸ್ತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರದ ಜನರೂ ಕೈಜೋಡಿಸಬೇಕು ಎಂದು ಹಿರಿಯ ವಿ.ರವಿಚಂದ್ರನ್ ಕರೆ ನೀಡಿದ್ದಾರೆ.

ಪ್ರವಾಹದಿಂದ ನಲುಗಿಹೋಗಿರುವ ಕೊಡಗು ಜನರ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ. ಸರ್ಕಾರವೂ ಕೂಡ ಪರಿಹಾರ ಘೋಷಣೆಯಾಗಿದ್ದು, ಈ ಬಗ್ಗೆ ನಟ ರವಿಚಂದ್ರನ್ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಮಾಡುತ್ತೆ ಎಂದು ಕಾಯುತ್ತ ಕೂರುವುದು ಬೇಡ, ಕಷ್ಟದ ಪರಿಸ್ಥಿತಿಗಳಲ್ಲಿ ನಾವೇ ಸರ್ಕಾರವಾಗಬೇಕು ಎಂದು ಎಂದು ಹೇಳಿದ್ದಾರೆ.

ಸ್ವತಃ ರವಿಚಂದ್ರನ್ ಹಾಗೂ ಉಪೇಂದ್ರ ಒಟ್ಟಾಗಿ ನಟಿಸುತ್ತಿರುವ ಸಿನಿಮಾದ ಮುಹೂರ್ತದ ವೇಳೆ ಮಾತನಾಡರು ಅವರು, ಕೊಡಗು ಪ್ರವಾಹ ಸಂತ್ರಸ್ತರಿಗೆ ಜನರು ಎಲ್ಲವನ್ನೂ ಮಾಡಿದ್ದಾರೆ. ಮಳೆ ನಿಂತ ಮೇಲೆ ಅಲ್ಲಿ ಬೇಕಾದ ಅಗತ್ಯ ಪರಿಹಾರವನ್ನು ಮಾಡಬೇಕಿದೆ. ಸರ್ಕಾರ ಮಾಡುತ್ತೆ ಎಂದು ಕಾಯುತ್ತ ಕೂರುವುದು ಬೇಡ, ನಾವೂ ಸರ್ಕಾರದ ಭಾಗವಾಗಬೇಕು ಎಂದು ಹೇಳಿದರು.(ಎನ್.ಬಿ)

Leave a Reply

comments

Related Articles

error: