ಪ್ರಮುಖ ಸುದ್ದಿವಿದೇಶ

ಕೇರಳ ಪ್ರವಾಹ ಕುರಿತು ಅವಹೇಳನ : ವ್ಯಕ್ತಿ ಕೆಲಸದಿಂದಲೇ ವಜಾ

ವಿದೇಶ(ದುಬೈ)ಆ,20:- ಕೇರಳ ಪ್ರವಾಹ ಕುರಿತಂತೆ ಅವಹೇಳನಕಾರಿಯಾಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡ ವ್ಯಕ್ತಿಯೀಗ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾನೆ.

ಭಾರತೀಯ ಮೂಲದ ರಾಹುಲ್ ಚೆರು ಹೆಸರಿನ ವ್ಯಕ್ತಿ ಕೇರಳ ಪ್ರವಾಹ ಕುರಿತಂತೆ ತನ್ನ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಎನ್ನಲಾಗಿದೆ.  ಈತ ಓಮಾನ್ ನ ಕಂಪನಿಯೊಂದರಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಹೇಳಿಕೆ ಪ್ರಕಟವಾಗುತ್ತಿದ್ದಂತೆ ಕಂಪನಿ ಕೆಲಸದಿಂದ ಕಿತ್ತೊಗೆದಿದೆ. ಆದರೆ ತಾನು ಮಾಡಿದ ಕೃತ್ಯಕ್ಕಾಗಿ ಕ್ಷಮೆಯಾಚಿಸಿದ್ದಾನೆ ಎನ್ನಲಾಗಿದೆ.

ರಾಹುಲ್ ಚೆರು ಪಾಲಾಯಟ್ಟು ಓಮಾನ್ ನಲ್ಲಿ ಲುಲು ಗ್ರೂಪ್ ಇಂಟರ್ ನ್ಯಾಶನಲ್ ನಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಬರೆಯುತ್ತಿದ್ದಂತೆ ಕಂಪನಿ  ನಿನ್ನೆಲ್ಲ ಜವಾಬ್ದಾರಿಯನ್ನು ರಿಪೋರ್ಟಿಂಗ್ ಮ್ಯಾನೇಜರ್ ಗೆ ವಹಿಸಿ, ಆದಷ್ಟು ಬೇಗ ಅಕೌಂಟ್ ಡಿಪಾರ್ಟ್ ಮೆಂಟ್ ನಿಂದ ಫೈನಲ್ ಸೆಟ್ಲ್ ಮೆಂಟ್ ಮಾಡಿಕೊಳ್ಳಿ ಎಂದಿದೆಯಂತೆ. ಕೂಡಲೇ ರಾಹುಲ್ ಕಂಪನಿಯ ಮುಖ್ಯಸ್ಥರಲ್ಲಿ ಕ್ಷಮೆಯಾಚಿಸಿದ್ದ ಎನ್ನಲಾಗಿದೆ. ನಿನ್ನೆ ಈ ಕುರಿತು ಫೇಸ್ ಬುಕ್ ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿ ನಾನು ಕ್ಷಮೆಯಾಚಿಸುತ್ತೇನೆ. ನಾನು ಬರೆಯುವಾಗ ನಾನೇನು ತಪ್ಪು ಮಾಡುತ್ತಿದ್ದೆನೆಂಬುದರ ಅರಿವಿರಲಿಲ್ಲ ಎಂದು ಹೇಳಿಕೊಂಡಿದ್ದಾನಂತೆ.

ಕಂಪನಿಯ ಸಿಇಓ ವಿ.ನಂದಕುಮಾರ್ ಈ ಕುರಿತು ನಾವು ತಕ್ಷಣವೇ ಕ್ರಮ ಕೈಗೊಂಡಿದ್ದೇವೆ. ನಮ್ಮ ಕಂಪನಿಯು ಮಾನವೀಯತೆ ಮತ್ತು ನೈತಿಕ ನಿಲುವನ್ನು ಹೊಂದಿದೆ.ಈ ಹಿನ್ನೆಲೆಯಲ್ಲಿ ಸೇವೆಯಿಂದ ಅವರನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ. (ಎಸ್.ಎಚ್)

Leave a Reply

comments

Related Articles

error: