ಕರ್ನಾಟಕಮೈಸೂರು

ನಾಗಪುರ ಹಾಡಿಯಲ್ಲಿ ಸೆಪ್ಟೆಂಬರ್ 18 ರಂದು ಪತ್ರಿಕಾ ದಿನಾಚರಣೆ: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿ ಪ್ರದಾನ

ಮೈಸೂರು ಜಿಲ್ಲಾ ಪತ್ರಕರರ್ತರ ಸಂಘವು ಸೆ.18 ರಂದು ನಾಗಪುರ ಹಾಡಿಯಲ್ಲಿ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ.  ಬೆ.10.30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಜ್ಞಾನ ಮತ್ತು ಪರಿಸರ ಪತ್ರಕರ್ತ ನಾಗೇಶ್ ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ, ಸಫಾಯಿ ಕರ್ಮಚಾರಿ ಆಂದೋಲನದ ರಾಷ್ಟ್ರೀಯ ಸಂಯೋಜಕ ಬೆಜ್ವಾಡ ವಿಲ್ಸನ್ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಘದ ಅಧ್ಯಕ್ಷ ಕೆ. ದೀಪಕ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಚಾಮರಾಜನಗರ ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ, ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್, ಖ್ಯಾತ ನಟಿ, ಬಾಲಭವನದ ಅಧ್ಯಕ್ಷೆ ಭಾವನ ಅವರು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸಮಾರಂಭದಲ್ಲಿ ಮೈಸೂರು ದಿಗಂತ ಪತ್ರಿಕೆಯ ಸತ್ಯಲಿಂಗರಾಜು, ಗ್ರಾಮಾಂತರ ಭಾಗದಿಂದ ಮೈಸೂರು ಮಿತ್ರ ಪತ್ರಿಕೆಯ ವರದಿಗಾರ ಪಿ.ಎಸ್. ವೀರೇಶ್, ವಿದ್ಯುನ್ಮಾನ ಮಾಧ್ಯಮ ವಿಭಾಗದಿಂದ ಜನಶ್ರೀ ವಾಹಿನಿಯ ಕೃಷ್ಣಕುಮಾರ್, ಉದಯ ಟಿವಿ ಕ್ಯಾಮೆರಾಮನ್ ಗುರುಪ್ರಸಾದ್, ಡೆಸ್ಕ್ ವಿಭಾಗದದಿಂದ ಕನ್ನಡಪ್ರಭಾ ಪತ್ರಿಕೆಯ ಶ್ರೀಕಾಂತ್, ಛಾಯಾಗ್ರಾಹಕ ವಿಭಾಗದಿಂದ ಹೆಚ್.ಡಿ. ಕೋಟೆಯ ನಂದಕುಮಾರ್ ಶೈಲಿ ಅವರನ್ನು ಸನ್ಮಾನಿಸಲಾಗುತ್ತದೆ.

ವರ್ಷದ  ಅತ್ಯುತ್ತಮ ಕನ್ನಡ ವರದಿಗಾರಿಕೆ ಪ್ರಶಸ್ತಿಯನ್ನು ಪ್ರಜಾನುಡಿ ಪತ್ರಿಕೆಯ ವಿನಯ್ ದೊಡ್ಡಕೊಪ್ಪಲು, ಇಂಗ್ಲೀ಼ಷ್ ವರದಿಗಾರಿಕೆ ಪ್ರಶಸ್ತಿಯನ್ನು ವಿನ್ಸೆಂಟ್ ಡಿ. ಸೋಜಾ, ಛಾಯಾಚಿತ್ರ ಪ್ರಶಸ್ತಿಯನ್ನು ಎಸ್.ಆರ್ ಮಧೂಸೂಧನ್, ವಿದ್ಯುನ್ಮಾನ ಮಾಧ್ಯಮದ ವಿಶೇಷ ವರದಿ ಪ್ರಶಸ್ತಿಯನ್ನು ಸುವರ್ಣ ಟಿವಿಯ ರವಿ ಪಾಂಡವಪುರ, ಪ್ರಮೋದ್ ಪ್ರಭುಗೆ ನೀಡಿ ಗೌರವಿಸಲಾಗುತ್ತದೆ.

ವಿಜ್ಞಾನ ವಿಷಯ ಚರ್ಚಾ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಗ್ರಾಮೀಣ ಪ್ರತಿಭೆ ಕು. ದೀಪ್ತಿ. ಎಸ್ ಮತ್ತು ಕೂಲಿ ಕಾರ್ಮಿಕನಾದರೂ ಪ್ರತಿದಿನ ಎಲ್ಲಾ ಪತ್ರಿಕೆಗಳನ್ನು ಕೊಂಡು ಓದುವ ಪತ್ರಿಕೆಗಳ ಅಭಿಮಾನಿ ರೇಡಿಯೋ ಶಿವಣ್ಣ ಅವರನ್ನು ಸಂಘದ ವತಿಯಿಂದ ವಿಶೇಷ  ಗೌರವ ಸಾಲಿನಲ್ಲಿ ಅಭಿನಂಧಿಸಲಾಗುತ್ತದೆ.

ಮೈಸೂರಿನಿಂದ ನಾಗಪುರ ಹಾಡಿಗೆ ತೆರಳುವ ಪತ್ರಕರ್ತರಿಗೆ ಪತ್ರಕರ್ತ ಭವನದಿಂದ ಬೆಳಗ್ಗೆ 8.30ಕ್ಕೆ ವಾಹನ ವ್ಯವಸ್ಥೆ ಮಾಡಲಾಗಿದ್ದು ಸಂಘದ ಎಲ್ಲ ಸದಸ್ಯರೂ ಆಗಮಿಸಬೇಕೆಂದು ಹೇಳಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶ್‍ ಬಾಬು ತಿಳಿಸಿದ್ದಾರೆ.

Leave a Reply

comments

Related Articles

error: