ಪ್ರಮುಖ ಸುದ್ದಿ

ಬ್ಯಾಂಕ್ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು 15 ಲಕ್ಷ ರೂ.ದರೋಡೆ

ರಾಜ್ಯ(ಮಂಡ್ಯ),ಆ.21:-  ಬ್ಯಾಂಕ್ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಖದೀಮರು 15 ಲಕ್ಷ ರೂ.ದರೋಡೆ ನಡೆಸಿದ ಘಟನೆ ಮಂಡ್ಯದ ಬಂದೀಗೌಡ ಬಡಾವಣೆಯ ಎಸ್ ಬಿಐ ಬ್ಯಾಂಕ್ ನಲ್ಲಿ ನಡೆದಿದೆ.

ಬ್ಯಾಂಕ್ ತೆರಯುತ್ತಿದ್ದಂತೆ ಗುಂಪು ಕಟ್ಟಿಕೊಂಡು ಬ್ಯಾಂಕ್ ಗೆ ಬಂದ ತಂಡವೊಂದು  ಬ್ಯಾಂಕ್ ಗೆ ಬಂದು ಮಾತನಾಡಿಸುತ್ತ ಗಮನ ಬೇರೆಡೆ ಸೆಳೆದು ಕ್ಯಾಷ್ ಕೌಂಟರ್ ನಿಂದ ಹಣ ಎಗರಿಸಿದ್ದಾರೆ. ಸುಮಾರು 15 ನಿಮಿಷಗಳ ಬಳಿಕ ಹಣ ಕಳ್ಳತನದ ವಿಷಯ ಬ್ಯಾಂಕ್ ಸಿಬ್ಬಂದಿಗಳ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಬ್ಯಾಂಕ್ ನ ಸಿ‌ಸಿ ಟಿವಿ ಫೂಟೇಜ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: